Asianet Suvarna News Asianet Suvarna News

ಮಹಾರಾಷ್ಟ್ರದ ಶಿರಡಿ ಬಳಿ ಭೀಕರ ಅಪಘಾತ: 10 ಮಂದಿ ಸಾಯಿಬಾಬಾ ಭಕ್ತರ ದುರ್ಮರಣ

ಮಹಾರಾಷ್ಟ್ರದ ನಾಸಿಕ್- ಶಿರಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದ ಅಪಘಾತ

10 Saibaba Devotees Killed in Road Accident at Shirdi in Maharashtra grg
Author
First Published Jan 13, 2023, 10:11 AM IST

ಶಿರಡಿ(ಜ.13):  ಲಾರಿ ಮತ್ತು ಖಾಸಗಿ ಟ್ರಾವೆಲ್ ಬಸ್ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ 10 ಮಂದಿ ಮೃತಪಟ್ಟು ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಮಹಾರಾಷ್ಟ್ರದ ನಾಸಿಕ್- ಶಿರಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು(ಶುಕ್ರವಾರ) ಬೆಳಗಿನ ಜಾವ 5.45 ಕ್ಕೆ ಸಂಭವಿಸಿದೆ. 

ಶಿರಡಿ ಯಿಂದ 20 ಕೀ.ಮಿ ದೂರದ ನಾಸಿಕ್- ಶಿರಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ. ಬಸ್‌ನಲ್ಲಿ ಒಟ್ಟು 45 ಪ್ರಯಾಣಿಕರು ಪ್ರವಾಸ ಮಾಡುತ್ತಿದ್ದರು ಅಂತ ತಿಳಿದು ಬಂದಿದೆ. ಲಾರಿ ಮತ್ತು ಖಾಸಗಿ ಟ್ರಾವೆಲ್ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾ ಮ 10 ಮಂದಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಹಲವರು ಸ್ಥಿತಿ ಗಂಭೀರವಾಗಿದೆ ಅಂತ ತಿಳಿದು ಬಂದುದೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.  ಮೃತರಲ್ಲಿ 7 ಪುರುಷರು ಮತ್ತು 3 ಮಹಿಳೆಯರಾಗಿದ್ದಾರೆ. ಮಹಾರಾಷ್ಟ್ರದ ಅಂಬ್ರನಾಥದಿಂದ ಶಿರಡಿ ಸಾಯಿ ಬಾಬಾ ದರ್ಶನಕ್ಕೆ ತೆರಳಿದ್ದರು. 

Kalaburagi: ಶಾಲಾ‌ ಮಕ್ಕಳಿದ್ದ‌ ಗೂಡ್ಸ್ ವಾಹನ ಪಲ್ಟಿ: 22 ಮಕ್ಕಳಿಗೆ ಗಾಯ

ಘಟನಾ ಸ್ಥಳದಲ್ಲಿ ಸ್ಥಳೀಯರು ಮತ್ತು ಶಿರಡಿ ಪೊಲೀಸರಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಗಾಯಗೊಂಡವರನ್ನ ಸಿರಡಿ ಸಾಯಿ ಬಾಬಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. 

Follow Us:
Download App:
  • android
  • ios