ಮಾಜಿ ಮೇಯರ್ ನಾಪತ್ತೆ ಕೇಸ್, ತನಿಖೆ ಚುರುಕು: ಸಂಪತ್‌ರಾಜ್‌ಗೆ ಆಗಲಿದ್ಯಾ ಮುಳುವು?

ಡಿ.ಜೆ.ಹಳ್ಳಿ-ಕೆ.ಜಿ ಹಳ್ಳಿ ಗಲಭೆ ವೇಳೆ ಪುಲಿಕೇಶಿ ನಗರ ಕ್ಷೇತ್ರದ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಪ್ರಕರಣದಲ್ಲಿ ಮಾಜಿ ಮೇಯರ್‌ ಹಾಗೂ ಸ್ಥಳೀಯ ಕಾಂಗ್ರೆಸ್‌ ಮುಖಂಡ ಸಂಪತ್‌ ರಾಜ್‌ ಆರೋಪಿಯಾಗಿದ್ದಾರೆ. 

First Published Nov 2, 2020, 2:10 PM IST | Last Updated Nov 2, 2020, 2:10 PM IST

ಬೆಂಗಳೂರು (ನ. 02): ಡಿ.ಜೆ.ಹಳ್ಳಿ-ಕೆ.ಜಿ ಹಳ್ಳಿ ಗಲಭೆ ವೇಳೆ ಪುಲಿಕೇಶಿ ನಗರ ಕ್ಷೇತ್ರದ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಪ್ರಕರಣದಲ್ಲಿ ಮಾಜಿ ಮೇಯರ್‌ ಹಾಗೂ ಸ್ಥಳೀಯ ಕಾಂಗ್ರೆಸ್‌ ಮುಖಂಡ ಸಂಪತ್‌ ರಾಜ್‌ ಆರೋಪಿಯಾಗಿದ್ದಾರೆ.

ಮಾರ್ಚ್‌ನಿಂದ ಇಲ್ಲಿಯವರೆಗೆ ನಿಮ್ಹಾನ್ಸ್‌ಗೆ 4 ಲಕ್ಷಕ್ಕೂ ಹೆಚ್ಚು ಮಂದಿ ಕರೆ: ಇವರೆಲ್ಲರದ್ದೂ ಒಂದೇ ಸಮಸ್ಯೆ!

ಇವರೀಗ ನಾಪತ್ತೆಯಾಗಿದ್ದು,  ತಕ್ಷಣವೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಅವರ ಮನೆಗಳಿಗೆ ಸಿಸಿಬಿ ನೋಟಿಸ್‌ ಅಂಟಿಸಿದೆ. ಪುಲಿಕೇಶಿ ನಗರದಲ್ಲಿರುವ ಮಾಜಿ ಮೇಯರ್‌ಗೆ ಸೇರಿದ ಎರಡು ಮನೆಗಳು ಹಾಗೂ ಅವರ ಅಕ್ಕನ ಮನೆಗೂ ಸಿಸಿಬಿ ನೋಟಿಸ್‌ ಅಂಟಿಸಿದೆ.