Asianet Suvarna News Asianet Suvarna News

ಮಾರ್ಚ್‌ನಿಂದ ಇಲ್ಲಿವರೆಗೆ ನಿಮ್ಹಾನ್ಸ್‌ಗೆ 4 ಲಕ್ಷಕ್ಕೂ ಹೆಚ್ಚು ಮಂದಿ ಕರೆ: ಇವರೆಲ್ಲರದ್ದೂ ಒಂದೇ ಸಮಸ್ಯೆ!

ಕೊರೊನಾ ಮಹಾಮಾರಿ ಜನರ ಬದುಕನ್ನೇ ಬದಲಾಯಿಸಿದೆ. ಲಾಕ್‌ಡೌನ್‌ನಿಂದ ಮನೆಯಲ್ಲೇ ಇದ್ದು ಮಾನಸಿಕವಾಗಿ ಕುಗ್ಗುವಂತೆ ಮಾಡಿದೆ. ಕೆಲಸವಿಲ್ಲ, ಆದಾಯವಿಲ್ಲ, ಮನೆಯಲ್ಲಿ ಕಿರಿಕಿರಿ.. ಹೀಗೆ ಒಬ್ಬೊಬ್ಬರದ್ದು ಒಂದೊಂದು ಕಥೆ.

ಬೆಂಗಳೂರು (ನ. 02): ಕೊರೊನಾ ಮಹಾಮಾರಿ ಜನರ ಬದುಕನ್ನೇ ಬದಲಾಯಿಸಿದೆ. ಲಾಕ್‌ಡೌನ್‌ನಿಂದ ಮನೆಯಲ್ಲೇ ಇದ್ದು ಮಾನಸಿಕವಾಗಿ ಕುಗ್ಗುವಂತೆ ಮಾಡಿದೆ. ಕೆಲಸವಿಲ್ಲ, ಆದಾಯವಿಲ್ಲ, ಮನೆಯಲ್ಲಿ ಕಿರಿಕಿರಿ.. ಹೀಗೆ ಒಬ್ಬೊಬ್ಬರದ್ದು ಒಂದೊಂದು ಕಥೆ. ಕೆಲವರು ಮಾನಸಿಕ ಖಿನ್ನತೆಗೂ ಜಾರಿದ್ದಾರೆ. 

ಕೊರೊನಾ ಸೋಂಕು ಇಳಿಕೆಯಾದರೂ ICU ದಾಖಲಾತಿ ಹೆಚ್ಚಾಗುತ್ತಿರುವುದೇಕೆ?

ಮಾರ್ಚ್‌ನಿಂದ ಇಲ್ಲಿಯವರೆಗೆ ನಿಮ್ಹಾನ್ಸ್‌ಗ 4 ಲಕ್ಷಕ್ಕೂ ಹೆಚ್ಚು ಮಂದಿ ಕಾಲ್ ಮಾಡಿದ್ದಾರಂತೆ. 'ನನಗೆ ಮನೆಯಲ್ಲಿ ಇರೋಕೆ ಆಗುತ್ತಿಲ್ಲ, ಆದಾಯವಿಲ್ಲ, ಏನು ಮಾಡಲಿ? ಆತ್ಮಹತ್ಯೆ ಮಾಡಿಕೊಳ್ಳೋಣ ಎನಿಸುತ್ತದೆ' ಎಂದು ನೋವನ್ನು ತೋಡಿಕೊಂಡಿದ್ದಾರಂತೆ. ಈ ಬಗ್ಗೆ ನಿಮಾನ್ಸ್‌ನಲ್ಲಿ ವೈದ್ಯರಾಗಿರುವ ಡಾ. ಶೇಖರ್ ಮಾತನಾಡಿದ್ದಾರೆ.