ಬಿಎಂಟಿಸಿ ಬಸ್‌ ಸಿಸಿಟಿವಿ ಕ್ಯಾಮರಾದಲ್ಲಿ ಅಚಾನಕ್ ಸೆರೆಸಿಕ್ಕ ರಾಮೇಶ್ವರಂ ಕೆಫೆ ಬಾಂಬರ್!

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದ ಶಂಕಿತ ಉಗ್ರ ಅಚಾನಕ್ ಆಗಿ ಬಿಎಂಟಿಸಿ ಬಸ್‌ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಸಿಕ್ಕಿದ್ದಾನೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ.07): ಕಳೆದೊಂದು ವಾರದ ಹಿಂದೆ ಬೆಂಗಳೂರಿನ ಕುಂದಲಹಳ್ಳಿಯಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಲು ಆಗಮಿಸುವ ವೇಳೆ ಶಂಕಿತ ಉಗ್ರ ಅಚಾನಕ್ ಆಗಿ ಬಿಎಂಟಿಸಿ ಬಸ್ ಹತ್ತಿದ್ದಾನೆ. ಆದರೆ, ಬಸ್‌ನಲ್ಲಿ ಸಿಸಿ ಕ್ಯಾಮರಾ ನೋಡಿದಾಕ್ಷಣ ಅದರಿಂದ ಮುಂದಕ್ಕೆ ಹೋಗಿ ಕ್ಯಾಮರಾದಿಂದ ಕಣ್ಮರೆಯಾಗಿದ್ದಾನೆ. ನಂತರ, ಕುಂದಲಹಳ್ಳಿಯ ಬಳಿ ಇಳಿದು ರಾಮೇಶ್ವರಂ ಕೆಫೆಗೆ ತೆರಳಿ ರವೆ ಇಡ್ಲಿ ತಿಂದು ಬಾಂಬ್ ಇಟ್ಟು ಬಂದಿದ್ದಾನೆ. ಈ ಬಾಂಬ್‌ಗೆ ಟೈಮ್ ಫಿಕ್ಸ್‌ ಮಾಡಿದ್ದಾನೆ. ಬಾಂಬ್ ಸ್ಪೋಟದ ನಂತರ ಸುಮಾರು 9 ಮಂದಿಗೆ ಗಂಭೀರ ಗಾಯವಾಗಿತ್ತು. ಈಗ ಗಾಯಗೊಂಡವರ ಪೈಕಿ ಬಹುತೇಕರು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಆದರೆ, ಸತತ ಒಂದು ವಾರಗಳ ಕಾಲ ಹುಡುಕಿದರೂ ಬಾಂಬ್ ಒಟ್ಟ ಆರೋಪಿ ಮಾತ್ರ ಸಿಗುತ್ತಿಲ್ಲ. ಪದೇ ಪದೆ ವೇಷ ಬದಲಿಸಿಕೊಂಡು ಅಲ್ಲಿಂದಿಲ್ಲಿಗೆ ಓಡಾಡುತ್ತಲೇ ಇದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video