
ಶಂಕಿತ ಉಗ್ರನ ಬಂಧನ: ಭಯೋತ್ಪಾದಕರ ಅಡಗುತಾಣವಾಗ್ತಿದೆಯಾ ಬೆಂಗಳೂರು?
* ತಾಲೀಬ್ ಬಂಧನದ ಬೆನ್ನಲ್ಲೇ ಬೆಂಗಳೂರು ಪೊಲೀಸರು ಹೈಅಲರ್ಟ್
* ಕಾಶ್ಮೀರ ಮೂಲದ ತಾಲೀಬ್‌ನನ್ನ ಹೆಡೆಮುರಿ ಕಟ್ಟಿದ ಪೊಲೀಸರು
* 8 ವರ್ಷದಿಂದ ಬೆಂಗಳೂರಿನಲ್ಲೇ ನೆಲೆಸಿದ್ದನಂತೆ ಬಂಧಿತ ಶಂಕಿತ ಉಗ್ರ
ಬೆಂಗಳೂರು(ಜೂ.08): ಕಾಶ್ಮೀರದ ತಾಲೀಬ್ ಬಂಧನದ ಬೆನ್ನಲ್ಲೇ ಬೆಂಗಳೂರು ಪೊಲೀಸರು ಹೈಅಲರ್ಟ್ ಆಗಿದ್ದಾರೆ. ಬೆಂಗಳೂರಿನಲ್ಲಿ ಅಡಗಿದ್ದ ಕಾಶ್ಮೀರದ ತಾಲೀಬ್‌ನನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈ ಮೂಲಕ ಉಗ್ರರ ಅಡಗುತಾಣವಾಗುತ್ತಿದೆಯಾ? ಎಂಬೆಲ್ಲ ಪ್ರಶ್ನೆಗಳು ಇದೀಗ ಉದ್ಭವವಾಗಿವೆ. ಕಳೆದ 8 ವರ್ಷದಿಂದ ತಾಲೀಬ್ ಬೆಂಗಳೂರಿನಲ್ಲೇ ನೆಲೆಸಿದ್ದನಂತೆ, ಬೆಂಗಳೂರಿನಲ್ಲಿ ತಾಲೀಬ್ ಇದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬೆಂಗಳೂರಿಗೆ ಆಗಮಿಸಿದ್ದರು. ಈತನ ಬಂಧನವಾಗುವ 15 ದಿನ ಮುಂಚೆಯೇ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಗರಕ್ಕೆ ಆಗಮಿಸಿದ್ದರು.
BIG 3: ಜಮೀನುಗಳಲ್ಲಿ ವಾಲಿದ ವಿದ್ಯುತ್ ಕಂಬಗಳು, ಜೀವಭಯದಲ್ಲಿ ಅನ್ನದಾತ..!