
ಬೆಂಗಳೂರು ಪೊಲೀಸರ ಫಿಲ್ಮೀ ಸ್ಟೈಲ್ ಚೇಸಿಂಗ್, ಕಾರು ಡಿಕ್ಕಿ, ಫೈರಿಂಗ್
ಇದು ಯಾವುದೇ ಫಿಲ್ಮ್ ಅಲ್ಲ, ಬೆಂಗಳೂರು ಪೊಲೀಸರು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ದರೋಡೆಕೋರರನ್ನು ಹಿಡಿದ ರೋಚಕ ವಿಡಿಯೋ
ಬೆಂಗಳೂರು (ಜುಲೈ 8): ಇದು ಬೆಂಗಳೂರು ಪೊಲೀಸರ (Bengaluru Police) ರಿಯಲ್ ಚೇಸಿಂಗ್ ಸ್ಟೋರಿ.ಸಿನಿಮಾ ಶೈಲಿಯಲ್ಲಿ ಚೇಸಿಂಗ್ ಮಾಡಿದ ಕಥೆ. ಚೇಸಿಂಗ್ (Chasing) ವೇಳೆ ಕಾರುಗಳಿಗೆ ಢಿಕ್ಕಿ, ಫೈರಿಂಗ್ ಎಲ್ಲಾ ನಡೆದ ದರೋಡೆಕೋರನನ್ನು(Robbers) ಬಂಧಿಸಿದ ಘಟನೆ ನಡೆದಿದೆ. ಜುಲೈ 4 ರಂದು ಆಭರಣ ಮಳಿಗೆಯ ದರೋಡೆ ಪ್ರಕರಣದಲ್ಲಿ ಕಳ್ಳರನ್ನು ಪೊಲೀಸರು ಸಿನೀಮಿಯ ಶೈಲಿಯಲ್ಲಿ ಬಂಧಿಸಿದ್ದಾರೆ.
ಆರೋಪಿಗಳ ಕಾರಿಗೆ ಪೊಲೀಸ್ ಕಾರ್ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದರಿಂದ ಆರೋಪಿಗಳು ಕಾರಿನಿಂದ ಕೆಳಗೆಬಿದ್ದಿದ್ದರು. ಕೆಳಗೆ ಬಿದ್ದ ಆರೋಪಿಗಳು ಸ್ಥಳದಲ್ಲೇ ಇದ್ದ ಜಮೀನಿಗೆ ನುಗ್ಗಿ ಓಡಲು ಆರಂಭಿಸಿದರು. ಈ ವೇಳೆ ಮತ್ತೊಂದು ಚೇಸಿಂಗ್ ನಡೆಸಿ ದರೋಡೆಕೋರರ ಹೆಡೆಮುರಿ ಕಟ್ಟಿದ್ದಾರೆ.
BENGALURU CRIME NEWS: ನಕಲಿ ಕಾಲ್ ಸೆಂಟರ್ ತೆರೆದು ಅಮೆರಿಕಾ ಪ್ರಜೆಗಳಿಗೆ ಕೋಟ್ಯಂತರ ರೂ. ವಂಚಿಸುತ್ತಿದ್ದ ಗ್ಯಾಂಗ್ ಅರೆಸ್ಟ್
ಎಲೆಕ್ಟ್ರಾನಿಕ್ ಸಿಟಿಯ ಮೈಲಸಂದ್ರ ಬಳಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ಇವರು ಬೇಕಾಗಿದ್ದರು. ಮೂವರು ಆರೋಪಿಗಳನ್ನು ಫಿಲ್ಮಿ ಸ್ಟೈಲ್‌ನಲ್ಲಿ ಚೇಸಿಂಗ್ ಮಾಡಿ ಬಂಧಿಸುವಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಯಶಸ್ವಿಯಾಗಿದ್ದಾರೆ.