ಕೋರ್ಟ್‌ಗೆ ಬಾಂಬ್ ಬೆದರಿಕೆ, ಮೂವರು ಅರೆಸ್ಟ್, ಕಾರಣ ಮಾತ್ರ ಸಖತ್ ಇಂಟರೆಸ್ಟಿಂಗ್!
NDPS ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಪಟೂರು ಮೂಲದ ರಾಜಶೇಖರ್, ಗುಬ್ಬಿ ತಾ. ಹಾಗಲವಾಡಿ ಮೂಲದ ವೇದಾಂತ್ ಎಂಬುವವರನ್ನು ಅರೆಸ್ಟ್ ಮಾಡಲಾಗಿದೆ.
ಬೆಂಗಳೂರು (ಅ. 20): NDPS ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಪಟೂರು ಮೂಲದ ರಾಜಶೇಖರ್, ಗುಬ್ಬಿ ತಾ. ಹಾಗಲವಾಡಿ ಮೂಲದ ವೇದಾಂತ್ ಎಂಬುವವರನ್ನು ಅರೆಸ್ಟ್ ಮಾಡಲಾಗಿದೆ. ಕೌಟುಂಬಿಕ ಕಲಹದ ಕಾರಣ ಕೋರ್ಟ್‌ಗೆ ಬಾಂಬ್ ಸ್ಟೋಟದ ಬೆದರಿಕೆ ಹಾಕಿದ್ದಾರೆ.
ಕೋರ್ಟ್‌ಗೆ ಬಂದಿದ್ದು ಜೀವಂತ ಡಿಟೋನೇಟರ್; NDPS ಆವರಣದಲ್ಲಿ ಖಾಕಿ ಬಿಗಿ ಭದ್ರತೆ
ಒಂದೇ ಕುಟುಂಬದ ಅಕ್ಕ- ತಂಗಿಯರನ್ನು ರಾಜಶೇಖರ್ ಹಾಗೂ ರಮೇಶ್ ಮದುವೆಯಾಗಿದ್ದರು. ಅತ್ತೆಯ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಇವರಿಬ್ಬರ ನಡುವೆ ಜಗಳವಾಗಿತ್ತು. ರಮೇಶ್‌ನನ್ನು ಜೈಲಿಗಟ್ಟಲು ಬಾಂಬ್ ಸ್ಫೋಟದ ಪ್ಲಾನ್ ಮಾಡಿದ್ದ ರಾಜಶೇಖರ್. ಹಾಗಾಗಿ ರಮೇಶ್ ಫೋನ್ ನಂಬರ್, ಆಧಾರ್ ಕಾರ್ಡನ್ನು ಇಟ್ಟು ಚೇಳೂರು ಅಂಚೆ ಕಚೇರಿಯಿಂದ ಪತ್ರವನ್ನು ಪೋಸ್ಟ್ ಮಾಡಿದ್ದ. ಅತೀ ಬುದ್ದಿವಂತಿಕೆ ತೋರಿಸಲು ಹೋಗಿ ರಾಜಶೇಖರ್ ತಗಲ್ಲಾಕ್ಕೊಂಡಿದ್ದಾನೆ.