Bengalur: ದಿ ಪಾರ್ಕ್ ಹೊಟೇಲ್ ಡ್ರಗ್ಸ್ ಪಾರ್ಟಿ: ಮತ್ತಷ್ಟು ವಿದೇಶಿಗರು ವಶಕ್ಕೆ

ದಿ ಪಾರ್ಕ್ ಹೊಟೇಲ್ ನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಮತ್ತಷ್ಟು ವಿದೇಶಿಗರನ್ನ ಪೊಲೀಸರು ವಶಕ್ಕೆ‌ಪಡೆದಿದ್ದಾರೆ. ಇದೇ ತಿಂಗಳ 14 ರಂದು ದಾಳಿ ನಡೆಸಿದ್ದ ಹಲಸೂರು ಪೊಲೀಸರು ಬಾಲಿವುಡ್ ಸೂಪರ್ ಸ್ಟಾರ್ ಶಕ್ತಿ ಕಪೂರ್ ಪುತ್ರ ಸೇರಿ ಹಲವರನ್ನ ವಶಕ್ಕೆ ಪಡೆದಿದ್ರು. 

Share this Video
  • FB
  • Linkdin
  • Whatsapp

ದಿ ಪಾರ್ಕ್ ಹೊಟೇಲ್ ನಲ್ಲಿ ಡ್ರಗ್ಸ್ ಪಾರ್ಟಿ (Drug Party) ಪ್ರಕರಣದಲ್ಲಿ ಮತ್ತಷ್ಟು ವಿದೇಶಿಗರನ್ನ ಪೊಲೀಸರು ವಶಕ್ಕೆ‌ಪಡೆದಿದ್ದಾರೆ. ಇದೇ ತಿಂಗಳ 14 ರಂದು ದಾಳಿ ನಡೆಸಿದ್ದ ಹಲಸೂರು ಪೊಲೀಸರು ಬಾಲಿವುಡ್ ಸೂಪರ್ ಸ್ಟಾರ್ ಶಕ್ತಿ ಕಪೂರ್ ಪುತ್ರ ಸೇರಿ ಹಲವರನ್ನ ವಶಕ್ಕೆ ಪಡೆದಿದ್ರು. ದಾಳಿ ವೇಳೆ 100 ಕ್ಕೂ ಮಂದಿ ಪಾರ್ಟಿಯಲ್ಲಿ ಇದ್ದವರಲ್ಲಿ ಹಲವರು ಪರಾರಿಯಾಗಿದ್ರು.

BIG 3: ಜಿಲೆಟಿನ್ ಸ್ಫೋಟಕ್ಕೆ ಗ್ರಾಮಸ್ಥರು ಕಂಗಾಲು, ಅಧಿಕಾರಿ- ಜನಪ್ರತಿನಿಧಿಗಳಿಗೆ ಜಾಣಕುರುಡು!

ಈ ಹಿನ್ನಲೆ ಪೊಲೀಸರು ಪರಾರಿಯಾದವರು ಹಾಗೂ ಪೆಡ್ಲರ್ ಗಳಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ದಿ ಪಾರ್ಕ್ ಹೊಟೆಲ್‌ನಲ್ಲಿ ಸಿಕ್ಕ ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ದಾಳಿ ಆರಂಭಿಸಿದ್ದಾರೆ. ಇಂದು ಬೆಳಗ್ಗೆ ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ಇರುವ ಎಲೆಗೆಂಟ್ ಆಸ್ಟರ್ ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಜೊತೆಗೆ ಅದೇ ಅಪಾರ್ಟ್ ಮೆಂಟ್ ಡ್ರಗ್ ಪಾರ್ಟಿ ನಡೆಯುತ್ತಿದೆ ಎಂಬ ಅನುಮಾನದ ಮೇಲೆ‌ ದಾಳಿ ನಡೆಸಲಾಗಿತ್ತು. ಇದೇ ವೇಳೆ ಅನುಮಾನ ಬಂದ‌ ಹೊರ ರಾಜ್ಯ‌ ಹಾಗೂ ವಿದೇಶಗರನ್ನ ವಶಕ್ಕೆ‌ಪಡೆದು ವೈದ್ಯಕೀಯ ತಪಾಸಣೆ ಒಳಪಡಿಸಲಾಗಿದೆ. ಅಲ್ಲದೆ, ದಿ ಪಾರ್ಕ್ ಹೋಟೆಲ್ ಪಾರ್ಟಿಗೆ ಸಂಭಧಿಸಿದಂತೆ ತನಿಖೆ‌ ಮುಂದುವರೆಸಿದ್ದಾರೆ. ಅಲ್ಲದೆ ಅನುಮಾನ ಬರುವ ಎಲ್ಲಾ ಪಿಜಿ, ಹೋಟೆಲ್ ಗಳಲ್ಲಿಯೂ ಪೊಲೀಸರು ತಪಾಸಣೆ ಮುಂದುವರೆಸಿದ್ದಾರೆ

Related Video