
BIG 3: ಜಿಲೆಟಿನ್ ಸ್ಫೋಟಕ್ಕೆ ಗ್ರಾಮಸ್ಥರು ಕಂಗಾಲು, ಅಧಿಕಾರಿ- ಜನಪ್ರತಿನಿಧಿಗಳಿಗೆ ಜಾಣಕುರುಡು!
ಈ ಘಟನೆಯಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು, ಮನೆಯಲ್ಲಿದ್ದ ಕುಟುಂಬವನ್ನು, ಮನೆ ಕಟ್ಟಿಸಿಕೊಡುವುದಾಗಿ ನಂಬಿಸಿ ಸಮುದಾಯ ಭವನಕ್ಕೆ ಸ್ಥಳಾಂತರಿಸಿದ್ದಾರೆ
ಚಿಕ್ಕಬಳ್ಳಾಪುರ (ಜೂ. 17): ಚಿಕ್ಕಬಳ್ಳಾಪುರ ಗುಡಿಬಂಡೆ ತಾಲೂಕಿನ ಹನುಮಂತಪುರ ಗ್ರಾಮಕ್ಕೆ ಹೊಂದಿಕೊಂಡಂತೆ ಆಂಜನೇಯ ಎಂಟರ್‌ಪ್ರೈಸೆರ್ಸ್ ಹಾಗೂ ಎಸ್ ಕೆ ಕ್ರಶರ್ಸ್ - ಎರಡು ಜೆಲ್ಲ ಕ್ರಶರ್ಸ್‌ಗಳಿವೆ. ಕ್ರಶರ್‌ಗಾಗಿ ಪಕ್ಕದಲ್ಲಿರುವ ಬಂಡೆಗಳನ್ನು ಸ್ಪೋಟಿಸುತ್ತಾರೆ. ಜೆಲೆಟಿನ್ ಸ್ಫೋಟದ ರಭಸಕ್ಕೆ ಗ್ರಾಮಸ್ಥ ಗುರುಮೂರ್ತಿ ಮನೆ ಬಿರುಕು ಬಿಟ್ಟಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಿಲ್ಲದೆ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಪೋಟದ ತೀವ್ರತೆ ಕಡಿಮೆ ಮಾಡಿ ಎಂದು ಕ್ರಶರ್ ಮಾಲೀಕರಿಗೆ ಜನ ಮನವಿ ಮಾಡಿಕೊಂಡರು ಕೇರ್ ಮಾಡುತ್ತಿಲ್ಲ. ಇತ್ತ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಾಗಿದ್ದಾರೆ. "ಬ್ಲಾಸ್ಟ್ ಮಾಡಿದಾಗ ಪಾತ್ರೆಗಳೆಲ್ಲ ಬಿರುಕು ಬಿಟ್ಟು, ಗೋಡೆ ಎಲ್ಲ ಶೇಕ್ ಆಗುತ್ತದೆ, ಅಧಿಕಾರಿಗಳಿಗೂ, ಎಲ್ಲರಿಗೂ ಮನವಿ ಮಾಡಿದ್ದೇನೆ, ಆದರೆ ಸ್ಥಳಕ್ಕೆ ಆಗಮಿಸಿದೆ ಅಧಿಕಾರಿಗಳು ವರದಿ ಕಳಿಸಿದ್ದೇವೆ ಎಂದು ಹೇಳಿದ್ದಾರೆʼ ಎಂದು ಸಂತ್ರಸ್ಥ ಗುರುಮೂರ್ತಿ ಆರೋಪಿಸಿದ್ದಾರೆ.
ಇದನ್ನೂ ನೋಡಿ: ಚಿತ್ರದುರ್ಗ: ಅರ್ಧಕ್ಕೆ ನಿಂತ ಶಾಲಾ ಕಟ್ಟಡ ಕಾಮಗಾರಿ, ಮರದ ಕೆಳಗೆ ಮಕ್ಕಳಗೆ ಪಾಠ
ಈ ಘಟನೆಯಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು, ಮನೆಯಲ್ಲಿದ್ದ ಕುಟುಂಬವನ್ನು, ಮನೆ ಕಟ್ಟಿಸಿಕೊಡುವುದಾಗಿ ನಂಬಿಸಿ ಸಮುದಾಯ ಭವನಕ್ಕೆ ಸ್ಥಳಾಂತರಿಸಿದ್ದಾರೆ. ಆದರೆ ಸ್ಥಳಾಂತರ ಮಾಡಿ ಒಂದು ವರ್ಷವಾದರೂ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಮನೆ ಕಳೆದುಕೊಂಡು ಕುಟುಂಬ ಈಗ ಬೀದಿಪಾಲಾಗಿದೆ. ಈ ಕುರಿತ ಬಿಗ್ 3 ವರದಿ ಇಲ್ಲಿದೆ