Asianet Suvarna News Asianet Suvarna News

'ಅಪ್ಪ ಅಂದ್ರೆ ಆಕಾಶ..' ಅಂದವಳನ್ನೇ ಬಾರದ ಲೋಕಕ್ಕೆ ಕಳಿಸಿದ ತಂದೆ!

ಅದು ಶಾಂತಿ ನಿವಾಸ... ಅಪ್ಪ.. ಅಮ್ಮ.. ಇಬ್ಬರು ಹೆಣ್ಣುಮಕ್ಕಳು.. ಸ್ವಂತ ಮನೆ.. ಒಳ್ಳೆ ಕೆಲಸ... ಮೊದಲ ಮಗಳು ಟೀಚರ್, ಎರಡನೇ ಮಗಳು ಡಾಕ್ಟರ್.. ಸುಖ ಸಂಸಾರ ಅಂದ್ರೆ ಈ ಕುಟುಂಬವನ್ನ ತೋರಿಸಿಬಿಡಬಹುದಿತ್ತು.. ಆದ್ರೆ ಈ ಸಂಸಾರದ ಮೇಲೆ ಅದ್ಯಾರ ಕಣ್ಣುಬಿತ್ತೋ ಎನೋ.. ಇವತ್ತು ಈ ಕುಟುಂಬದ ಯಜಮಾನ ಜೈಲಿನಲ್ಲಿದ್ರೆ ಮೊದಲ ಮಗಳು ಮಸಣ ಸೇರಿದ್ದಾಳೆ. 
 

ಬೆಂಗಳೂರು (ಮಾ.18): ಹೆತ್ತ ಅಪ್ಪನೇ ಮಗಳನ್ನ ಕೊಂದು ಹಾಕಿದ ಘಟನೆ ಬೆಂಗಳೂರಿನ ಕೋಡಿಗೆಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಷ್ಟಕ್ಕೂ ಹುಟ್ಟಿಸಿದ ಅಪ್ಪನೇ ಮಗಳನ್ನ ಕೊಂದಿದ್ದೇಕೆ..? ಅಂತಹ ತಪ್ಪು ಆ ಮಗಳು ಮಾಡಿದ್ದಾದ್ರೂ ಏನು..? ಮಗಳನ್ನೇ ಕೊಲ್ಲುವ ಹಂತಕ್ಕೆ ಆತ ಹೋಗಿದ್ದೇಕೆ..? 

ಮಗಳದ್ದು ಅನ್ನ್ಯಾಚುರೆಲ್ ಡೆತ್ ಅಂತ ಹೇಳಿ ಸ್ವತಃ ಪೊಲೀಸರನ್ನು ಕರೆಸಿದ್ದ ತಂದೆ. ಆದರೆ, ಪೊಲೀಸರು ಸ್ಥಳಕ್ಕೆ ಬಂದು ನೋಡಿದರೆ, ಮರ್ಡರ್ ಅಂತನ್ನಿಸೋಕೆ ಶುರುವಾಗಿತ್ತು. ಹಾಗಾದ್ರೆ ತಂದೆ ಅಲ್ಲಿ ಸುಳ್ಳು ಹೇಳಿದ್ರಾ..? ಮಗಳ ಸಾವಿನಲ್ಲಿ ತಂದೆಯ ಪಾತ್ರ ಏನಾದ್ರೂ ಇದ್ಯಾ ಅನ್ನೋ ಅನುಮಾನ ಪೊಲೀಸರಿಗೆ ಶುರುವಾಗಿಬಿಟ್ಟಿತ್ತು.. ಇದೇ ಅನುಮಾನದ ಮೇಲೆಯೇ ಪೊಲೀಸರು ತನಿಖೆ ಶುರು ಮಾಡಿದ್ದರು.

ಬೆಂಗಳೂರಲ್ಲಿ ಹೆತ್ತ ಮಗಳನ್ನೇ ಕೊಲೆಗೈದ ದುಷ್ಟ ತಂದೆ: ದೊಣ್ಣೆಯಿಂದ ಹಲ್ಲೆ

ಕೇವಲ ಜಗಳ ಮಾಡಿದಕ್ಕೇ ಅಪ್ಪ ಮಗಳನ್ನ ಕೊಂದು ಬಿಡ್ತಾನೆ ಅಂದ್ರೆ ಯಾರಾದ್ರೂ ನಂಬೋದಕ್ಕೆ ಆಗುತ್ತಾ..? ಇಲ್ಲ.. ಅಲ್ಲಿ ಆಶಾಳ ಕೊಲೆಗೆ ಮತ್ತೊಂದು ದೊಡ್ಡ ಕಾರಣವಿತ್ತು.