ಬೆಂಗಳೂರು ಜೋಡಿ ಕೊಲೆ: ಜೋಕರ್‌ ಫೆಲಿಕ್ಸ್ & ಟೀಂ ಎಸ್ಕೇಪ್‌ ಪ್ಲಾನ್ ಬಿಚ್ಚಿಟ್ಟ ಸಿಸಿಟಿವಿಗಳು!

ಬೆಂಗಳೂರನ್ನು ಬೆಚ್ಚಿ ಬೀಳಿಸಿರುವ ಡಬಲ್‌ ಮರ್ಡರ್‌ ಪ್ರಕರಣದ ಮತ್ತಷ್ಟು ಆಘಾತಕಾರಿ ಅಂಶಗಳು ಬಯಲಾಗುತ್ತಿವೆ. ಮುಖ್ಯವಾಗಿ ಆರೋಪಿಗಳು ಎಸ್ಕೇಪ್ ಆಗುವ ಸಿಸಿಟಿವಿ ದೃಶ್ಯ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜು.13): ರಾಜಧಾನಿಯನ್ನೇ ಬೆಚ್ಚಿಬೀಳಿಸಿದ್ದ ಜೋಡಿ‌ ಕೊಲೆ ಪ್ರಕರಣ ಸಂಬಂಧ ಮೂವರನ್ನು ಬಂಧಿಸಿ ತನಿಖೆ ಚುರುಕುಗೊಳಿಸಿದ್ದ ಅಮೃತಹಳ್ಳಿ ಪೊಲೀಸರು ಇದೀಗ ಕೊಲೆಗೀಡಾದ ಎಂ.ಡಿ ಹಾಗೂ ಸಿಇಒ ಈ ಹಿಂದೆ ಕೆಲಸ‌ ಮಾಡುತ್ತಿದ್ದ ಕಂಪನಿ ಮಾಲೀಕನನ್ನು ಬಂಧಿಸಿದ್ದಾರೆ. ಮುಖ್ಯವಾಗಿ ಆರೋಪಿಗಳು ಎಸ್ಕೇಪ್ ಆಗುವ ಸಿಸಿಟಿವಿ ದೃಶ್ಯ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ಏರೋನಿಕ್ಸ್ ಕಂಪನಿ ಎಂಡಿ ಫಣೀಂದ್ರ ಹಾಗೂ ಸಿಇಒ ವಿನುಕುಮಾರ್ ಅವರನ್ನು ಅಮೃತಹಳ್ಳಿಯ ಅವರ ಕಚೇರಿಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಹಂತಕರು ಎಸ್ಕೇಪ್ ಆಗಿದ್ದೇ ರೋಚಕವಾಗಿದೆ. 

ಬೈಕ್‌ನಲ್ಲಿ ಬಂದಿದ್ದ ಹಂತಕರು ಬಳಿಕ ಬರಿಗಾಲಲ್ಲೇ ಎಸ್ಕೇಪ್ ಆಗಿದ್ದರು. ಒಂದು ತಿಂಗಳ ಹಿಂದೆಯೇ ಸ್ಥಳಕ್ಕೆ ಬಂದು ದಾರಿಗಳ ಬಗ್ಗೆ ಸಂಚು ರೂಪಿಸಿಕೊಂಡಿದ್ದರು. ಹಿಂಬದಿ ಡೋರ್ ತೆಗೆದು ಕಾಂಪೌಂಡ್ ಹಾರಿ ಎಸ್ಕೇಪ್ ಅಲ್ಲಿಂದ ಮುಖ್ಯರಸ್ತೆಗೆ ಬಂದು ಓಲಾ ಬುಕ್ ಮಾಡಿದ್ದ ಅವರು ಏರಿಯಾ ಬಿಟ್ಟಿದ್ದರು. ಕೊಲೆ ನಂತರ ಫೆಲಿಕ್ಸ್ ಅಂಡ್ ಟೀಂ ಪರಾರಿ ಆಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ವಿನಯ್ ಕುಮಾರ್ ರೆಡ್ಡಿ ತನ್ನ ಪ್ಯಾಂಟ್​​ನಲ್ಲಿ ಡ್ರ್ಯಾಗರ್ ಇಟ್ಟುಕೊಂಡು ಎಸ್ಕೇಪ್ ಆಗುತ್ತಿದ್ದಾಗ ಡ್ರ್ಯಾಗರ್ ಇಟ್ಟುಕೊಳ್ಳಲು ಸಂತೋಷ್ ಸಹಾಯ ಮಾಡಿದ್ದಾನೆ. ಏನೂ ಗೊತ್ತಿಲ್ಲದಂತೆ ಜೋಕರ್ ಫೆಲಿಕ್ಸ್ ಹಿಂದೆ ಹೋಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

Related Video