
ಒಂಟಿ ಜೀವನದ ದುರಂತ ಅಂತ್ಯ; ಕಸದ ಲಾರಿಯೊಳಗೆ ಶವ ಎಸೆದು ಪರಾರಿ
ಅನಾಥೆಯಾಗಿದ್ದ ಮಹಿಳೆಯೊಬ್ಬರ ಕೊಲೆಯಾದ ಕಥೆ. ಕಸದ ರಾಶಿಯಲ್ಲಿ ಮೃತದೇಹ ಪತ್ತೆ. ಕೊಲೆಗಾರ ಯಾರು? ಕಾರಣವೇನು?
ಆಕೆ ಅನಾಥೆ.. ಅಪ್ಪ ಅಮ್ಮ.. ಬಂಧು ಬಳಗ ಯಾರೂ ಇಲ್ಲ.. ವರ್ಷಗಳ ಹಿಂದೆ ಮದುವೆಯಾದಳು.. ಆದ್ರೆ ಗಂಡನೂ ಸತ್ತು ಹೋಗಿದ್ದ... ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡು ತನ್ನ ಒಂಟಿ ಜೀವನ ಸಾಗಿಸುತ್ತಿದ್ದಳು.. ಆದ್ರೆ ಇವತ್ತು ಅದೇ ಹೆಣ್ಣುಮಗಳು ಬೀದಿ ಹೆಣವಾಗಿದ್ದಾಳೆ.. ಅವಳ ಮೃತದೇಹ ಕಸದ ರಾಶಿಯಲ್ಲಿ ಸಿಕ್ಕಿದೆ.. ಇನ್ನೂ ತನಿಖೆ ನಡೆಸಿದ ಪೊಲೀಸರಿಗೆ ಯಾರೋ ಒಬ್ಬ ಚೀಲದಲ್ಲಿ ಅವಳ ಮೃತದೇಹವನ್ನ ತಂದು ಕಸದ ಲಾರಿಯಲ್ಲಿ ಎಸೆದು ಹೋಗಿರೋದು ಸಿಸಿ ಕ್ಯಾಮರಾದಲ್ಲಿ ಕಂಡಿದೆ.. ಅಷ್ಟಕ್ಕೂ ಆ ಹೆಣ್ಣುಮಗಳಿಗೆ ಏನಾಯ್ತು..? ಅವಳ ಮೃತದೇಹವನ್ನ ಮೂಟೆ ಕಟ್ಟಿ ತಂದ ಆತ ಯಾರು..? ಒಬ್ಬ ನತದೃಷ್ಟ ಹೆಣ್ಣುಮಗಳೊಬ್ಬಳ ದುರಂತ ಅಂತ್ಯದ ಕಥೆಯೇ ಇವತ್ತಿನ ಎಫ್.ಐ.ಆರ್...…