Asianet Suvarna News Asianet Suvarna News

ಮಾಜಿ ಮೇಯರ್ ಸಂಪತ್‌ರಾಜ್‌ಗಾಗಿ ತೀವ್ರ ಶೋಧ; ಹೊರರಾಜ್ಯಗಳಲ್ಲೂ ಫೀಲ್ಡಿಗಿಳಿದಿದೆ ಸಿಸಿಬಿ

Nov 2, 2020, 3:39 PM IST
  • facebook-logo
  • twitter-logo
  • whatsapp-logo

ಬೆಂಗಳೂರು (ನ. 02): ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯ ಪ್ರಮುಖ ಆರೋಪಿ, ಮಾಜಿ ಮೇಯರ್ ಸಂಪತ್ ರಾಜ್ ನಾಪತ್ತೆಯಾಗಿದ್ದಾರೆ. ಅವರಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. 4 ರಾಜ್ಯಗಳಲ್ಲಿ ವಿಶೇಷ ತಂಡಗಳಿಂದ ಕಾರ್ಯಾಚರಣೆ ನಡೆಯುತ್ತಿದೆ. ಸಂಪತ್ ರಾಜ್ ಅವರ ಸಂಬಂಧಿಕರು, ಸ್ನೇಹಿತರ ಮನೆಗಳಲ್ಲಿ ತಲಾಷ್ ನಡೆದಿದೆ. 

ಮಾಜಿ ಮೇಯರ್ ನಾಪತ್ತೆ ಕೇಸ್, ತನಿಖೆ ಚುರುಕು: ಸಂಪತ್‌ರಾಜ್‌ಗೆ ಆಗಲಿದ್ಯಾ ಮುಳುವು?

ಈ ಪ್ರಕರಣ ಸಂಬಂಧ ಒಂದು ಬಾರಿ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದ ಸಂಪತ್‌ ರಾಜ್, ಎರಡನೇ ಬಾರಿ ನೋಟಿಸ್‌ ಗೆ ಕೊರೋನಾ ಸೋಂಕು ನೆಪ ಹೇಳಿ ವಿಚಾರಣೆಗೆ ಗೈರಾಗಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ನಾಪತ್ತೆಯಾಗಿದ್ದಾರೆ.