Asianet Suvarna News Asianet Suvarna News

ಲಕ್ಷ ಖರ್ಚು ಮಾಡಿ ಕೋಟಿ ಗಳಿಸಿ ಕೊಡ್ತಿದ್ದ ಹ್ಯಾಕರ್ ಶ್ರೀಕಿ ಅರೆಸ್ಟ್!

Nov 19, 2020, 10:22 AM IST

ಬೆಂಗಳೂರು (ನ. 19): ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಹಾಗೂ ಆತನ ಸ್ನೇಹಿತರ ವಿರುದ್ಧ ಡ್ರಗ್ಸ್ ಪ್ರಕರಣದ ಬೆನ್ನು ಹತ್ತಿರುವ ಸಿಸಿಬಿ, ಈಗ ಆ ತಂಡದೊಂದಿಗೆ ನಂಟು ಹೊಂದಿದ್ದ ಅಂತರಾಷ್ಟ್ರೀಯ ಮಟ್ಟದ ಕುಖ್ಯಾತ ಹ್ಯಾಕರ್‌ವೊಬ್ಬನನ್ನು ಸೆರೆ ಹಿಡಿದಿದೆ. 

ಬಿಹಾರ ಚುನಾವಣೆ, ಕಾಂಗ್ರೆಸ್ ಸೋಲಿನ ಹಿಂದಿನ ಕಾರಣ ಬಹಿರಂಗಪಡಿಸಿದ ಹಿರಿಯ ನಾಯಕ!

ಶ್ರೀ ಕೃಷ್ಣ ಅಲಿಯಾಸ್ ಶ್ರೀಕಿಯನ್ನು ಬಂಧಿಸಲಾಗಿದೆ. ಈತ ಮೊದಲ ಬಾರಿಗೆ ರನ್‌ಸ್ಕೈಪ್ ಎಂಬ ಆನ್‌ಲೈನ್ ಗೇಮ್ ಹ್ಯಾಕ್ ಮಾಡಿದ್ದ. ನಂತರ ಇಂಡಿಯನ್ ಪೋಕರ್ ವೆಬ್‌ಸೈಟ್, ಆನ್‌ಲೈನ್ ಬಿಟ್ ಕಾಯಿನ್ ಮತ್ತು ಇತರೆ ವೆಬ್‌ಸೈಟ್‌ಗಳಿಗೆ ಕನ್ನ ಹಾಕಿದ್ದ. ಈತನಿಗೆ ಲಕ್ಷಗಟ್ಟಲೇ ಖರ್ಚು ಮಾಡಿದ್ರೆ ಕೋಟಿಗಟ್ಟಲೇ ಹಣ ಗಳಿಸಿಕೊಡುತ್ತಿದ್ದ.