Asianet Suvarna News Asianet Suvarna News

ಬೆಂಗಳೂರು: ಫ್ಲೈಓವರ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಕಾರು ಡಿಕ್ಕಿ, ಸವಾರ ಸಾವು!

 ಏರ್‌ಪೋರ್ಟ್ ಫ್ಲೈ ಓವರ್ (Flyover) ಮೇಲೆ ನಿಂತಿದ್ದ ಬೈಕ್‌ಗೆ ಕಾರು ಡಿಕ್ಕಿಯಾಗಿ (Car Bike Accident) ಬೈಕ್ ಸವಾರ ಗೋವಿಂದಪ್ಪ ಎನ್ನುವವರು ಸಾವನ್ನಪ್ಪಿದ್ದಾರೆ. 

ಬೆಂಗಳೂರು (ಮೇ.22):  ಏರ್‌ಪೋರ್ಟ್ ಫ್ಲೈ ಓವರ್ (Flyover) ಮೇಲೆ ನಿಂತಿದ್ದ ಬೈಕ್‌ಗೆ ಕಾರು ಡಿಕ್ಕಿಯಾಗಿ (Car Bike Accident) ಬೈಕ್ ಸವಾರ ಗೋವಿಂದಪ್ಪ ಎನ್ನುವವರು ಸಾವನ್ನಪ್ಪಿದ್ದಾರೆ. ಸಂಬಂಧಿ ಮಗನಿಗೆ ಏರ್‌ಡ್ರಮ್ ತೋರಿಸಲು ಬಂದಿದ್ದರು. ಫ್ಲೈ ಓವರ್ ಮೇಲೆ ಬೈಕ್ ನಿಲ್ಲಿಸಿ, ಏರ್‌ಡ್ರಮ್ ತೋರಿಸುವಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು, ಫ್ಲೈಓವರ್‌ನಿಂದ ಬಿದ್ದು ಗೋವಿಂದಪ್ಪ ಸಾವನ್ನಪ್ಪಿದ್ದಾರೆ. ಜೊತೆಗಿದ್ದ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.  ಚಾಲಕ ವರುಣ್‌ರನ್ನು ಬಂಧಿಸಲಾಗಿದೆ. 

ಕತ್ರಿಗುಪ್ಪೆಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್