ಬೆಂಗಳೂರು: ವಕೀಲನ ಮೇಲೆ ಖಾಕಿ ದೌರ್ಜನ್ಯ, ಸಿಸಿಟಿವಿಯಲ್ಲಿ ಥಳಿತದ ದೃಶ್ಯ ಸೆರೆ
ಪೊಲೀಸರ ಮೇಲೆಯೇ ಕೇಸ್ ದಾಖಲಾದ ಸ್ಟೋರಿ ಇದು. ಜನರನ್ನು ಕಾಯಬೇಕಾದ ಪೊಲೀಸರರೇ, ಜನರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಅಮೃತ್ ಹಳ್ಳಿಯ ಮನೆಯ ಪಕ್ಕದಲ್ಲಿದ್ದ ಮಾರುತಿ ಬಾರ್ ವಿಚಾರಕ್ಕೆ ಬಾರ್ ಮಾಲಿಕ ಹಾಗೂ ಓನರ್ ನಡುವೆ ಗಲಾಟೆಯಾಗುತ್ತದೆ.
ಬೆಂಗಳೂರು (ಜೂ. 23): ಪೊಲೀಸರ ಮೇಲೆಯೇ ಕೇಸ್ ದಾಖಲಾದ ಸ್ಟೋರಿ ಇದು. ಜನರನ್ನು ಕಾಯಬೇಕಾದ ಪೊಲೀಸರರೇ, ಜನರ ಮೇಲೆ ದೌರ್ಜನ್ಯ ನಡೆಸಿದ್ದಾರೆ.
ಈದ್ಗಾ ಮೈದಾನ ವಿವಾದ: ಯೂ ಟರ್ನ್ ಹೊಡೆದ ಬಿಬಿಎಂಪಿ ಆಯುಕ್ತ, ಹಿಂದೂ ಸಂಘಟನೆಗಳ ಆಕ್ರೋಶ
ಅಮೃತ್ ಹಳ್ಳಿಯ ಮನೆಯ ಪಕ್ಕದಲ್ಲಿದ್ದ ಮಾರುತಿ ಬಾರ್ ವಿಚಾರಕ್ಕೆ ಬಾರ್ ಮಾಲಿಕ ಹಾಗೂ ಓನರ್ ನಡುವೆ ಗಲಾಟೆಯಾಗುತ್ತದೆ. ಆಗ ಅಪರಿಚಿತರು ಪೊಲೀಸರಿಗೆ ಕಾಲ್ ಮಾಡುತ್ತಾರೆ. ಸ್ಥಳಕ್ಕೆ ಬಂದು ಪೊಲೀಸರು ವಿಚಾರಣೆ ನಡೆಸುವಾಗ, ಮನೆಯ ಮುಂದಿದ್ದ ಲಾಯರ್ ಸುದರ್ಶನ್ ಅವರನ್ನು ತೋರಿಸಿ, ಇವರೇ ನಿಮಗೆ ಕಾಲ್ ಮಾಡಿದ್ದು ಎನ್ನುತ್ತಾರೆ. ಆಗ ಪೊಲೀಸರು ಲಾಯರ್ ಮೇಲೆ ಹಲ್ಲೆ ನಡೆಸುತ್ತಾರೆ. ಇದನ್ನು ತಪ್ಪಿಸಲು ಲಾಯರ್ ಪತ್ನಿ ಬರುತ್ತಾರೆ. ಅವರ ಮೇಲೂ ಹಲ್ಲೆ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರ ಮೇಲೆ ವಕೀಲರು ದೂರು ದಾಖಲಿಸಿದ್ದಾರೆ.