ಸೀರೆ ಅಂಗಡಿಯಲ್ಲಿ ನಾರಿಯರ ಕೈಚಳಕ: ಸೀರೆಯೊಳಗೆ ಸೀರೆ ಸೇರಿಸಿಕೊಂಡು ಪರಾರಿ: ವೀಡಿಯೋ
ದುಬಾರಿ ಸೀರೆಯುಟ್ಟು ಚಿನ್ನಾಭರಣ ಧರಿಸಿ ಸ್ಕಾರ್ಫಿಯೋ ವಾಹನದಲ್ಲಿ ಬಂದು ದೊಡ್ಡ ದೊಡ್ಡ ಸೀರೆ ಅಂಗಡಿಗಳಲ್ಲಿ ಲಕ್ಷಾಂತರ ಮೌಲ್ಯದ ಸೀರೆ ಕದ್ದು ಪರಾರಿಯಾಗುತ್ತಿದ್ದ ಗುಂಟೂರು ಮೂಲದ ಸೀರೆ ಕಳ್ಳರ ಗ್ಯಾಂಗೊಂದನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ದುಬಾರಿ ಸೀರೆಯುಟ್ಟು ಚಿನ್ನಾಭರಣ ಧರಿಸಿ ಸ್ಕಾರ್ಫಿಯೋ ವಾಹನದಲ್ಲಿ ಬಂದು ದೊಡ್ಡ ದೊಡ್ಡ ಸೀರೆ ಅಂಗಡಿಗಳಲ್ಲಿ ಲಕ್ಷಾಂತರ ಮೌಲ್ಯದ ಸೀರೆ ಕದ್ದು ಪರಾರಿಯಾಗುತ್ತಿದ್ದ ಗುಂಟೂರು ಮೂಲದ ಸೀರೆ ಕಳ್ಳರ ಗ್ಯಾಂಗೊಂದನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆ ಜೊತೆಯಾಗಿ ನಗರದ ದೊಡ್ಡ ದೊಡ್ಡ ಶಾಪ್‌ಗಳಿಗೆ ಬರುತ್ತಿದ್ದ ಈ ಸೀರೆ ಕಳ್ಳರ ಗ್ಯಾಂಗ್ ಮೆಲ್ಲನೆ ಸೀರೆಯೊಳಗೆ ಸೀರೆ ಸೇರಿಸಿ ಲಕ್ಷಾಂತರ ಮೌಲ್ಯದ ಸೀರೆ ಕದ್ದು ಪರಾರಿಯಾಗುತ್ತಿದ್ದರು. ಹೀಗೆ ಸೀರೆ ಕದ್ದು ಪರಾರಿಯಾಗುತ್ತಿದ್ದ ವೇಳೆ ಒಂದು ಸೀರೆ ಬಿದ್ದೋಗಿದ್ದು, ಇದನ್ನು ಗಮನಿಸಿದ ಶಾಪ್‌ನ ಸಿಬ್ಬಂದಿ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸಿಸಿಟಿವಿ ಪರಿಶೀಲಿಸಿದಾಗ ಈ ನಾರಿಯರ ಕೈಚಳಕ ಗಮನಕ್ಕೆ ಬಂದಿದೆ. ಇವರ ಕೃತ್ಯ ಅಂಗಡಿಗಳ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು ಅಂಗಡಿ ಮಾಲೀಕರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆಗೆ ಇಳಿದ ರಾಜಧಾನಿಯ ಅಶೋಕ ನಗರ ಹಾಗೂ ಹೈಗ್ರೌಂಡ್ಸ್ ಠಾಣೆ ಪೊಲೀಸರು ಈಗ ಸೀರೆ ಕಳ್ಳ ನಾರಿಯರ ಗ್ಯಾಂಗ್ ಬಂಧಿಸಿದ್ದಾರೆ. ಗುಂಟೂರು ಮೂಲದ ರಮಣ, ರತ್ನಲು, ಚಿಕ್ಕಮ್ಮ ಬಂಧಿತರು. ಇವರು 50 ಲಕ್ಷದಿಂದ 60 ಲಕ್ಷ ಮೌಲ್ಯದ ಸೀರೆಗಳನ್ನೇ ಎಗ್ಗರಿಸುತ್ತಿದ್ದರು ಎಂದು ತಿಳಿದು ಬಂದಿದೆ.