ಮಾಜಿ ಮೇಯರ್​​​ ಮಗನ ಬರ್ತಡೇ ಪಾರ್ಟಿ: ಜಾಗ ಬಿಡು ಅಂದಿದಕ್ಕೆ ಸ್ನೇಹಿತನನ್ನೇ ಕೊಂದು ಬಿಟ್ಟ!

ಅವನು ಮಾಜಿ ಮೇಯರ್​​ ಒಬ್ಬರ ಮಗ. ಕಾಂಗ್ರೆಸ್​​ ಕಾರ್ಯಕರ್ತ ಕೂಡ... ಬಡ್ಡಿ ವ್ಯವಹಾರ ಮಾಡೋದು ಸಣ್ಣ ಪುಟ್ಟ ಡೀಲ್​ ಮಾಡೋದು ಇವನ ಫುಲ್​ ಟೈಂ ಜಾಬ್​​... ಆದ್ರೆ ಆವತ್ತೊಂದು ದಿನ ತನ್ನ ಬರ್ತಡೇ ಪಾರ್ಟಿ ಆಚರಿಸಿಕೊಂಡಿದ್ದ.

Share this Video
  • FB
  • Linkdin
  • Whatsapp

ಅವನು ಮಾಜಿ ಮೇಯರ್​​ ಒಬ್ಬರ ಮಗ. ಕಾಂಗ್ರೆಸ್​​ ಕಾರ್ಯಕರ್ತ ಕೂಡ... ಬಡ್ಡಿ ವ್ಯವಹಾರ ಮಾಡೋದು ಸಣ್ಣ ಪುಟ್ಟ ಡೀಲ್​ ಮಾಡೋದು ಇವನ ಫುಲ್​ ಟೈಂ ಜಾಬ್​​... ಆದ್ರೆ ಆವತ್ತೊಂದು ದಿನ ತನ್ನ ಬರ್ತಡೇ ಪಾರ್ಟಿ ಆಚರಿಸಿಕೊಂಡಿದ್ದ. ತನ್ನ ಛೇಳ ಗ್ಯಾಂಗ್​​​​​​ ಜೊತೆ ಹೋಗಿ ರಸ್ತೆ ಮಧ್ಯದಲ್ಲೇ ಲಾಂಗು ಮಚ್ಚುಗಳನ್ನ ಹಿಡಿದು ಡ್ಯಾನ್ಸ್​​ ಮಾಡ್ತಿದ್ದ. ಆದ್ರೆ ಇದೇ ಟೈಂನಲ್ಲಿ ತನ್ನದೇ ಸ್ನೇಹಿತ ಬಂದು ಬುದ್ಧಿ ಮಾತು ಹೆಳಿದಕ್ಕೆ ಗೆಳಯ ಅನ್ನೋದನ್ನೂ ನೋಡದೇ ಕೊಂದು ಮುಗಿಸಿದ್ದ. ಕೇಕ್​ ಕಟ್​ ಮಾಡಲು ತಂದಿದ್ದ ತಲ್ವಾರ್​ನಿಂದಲೇ ಸ್ನೇಹಿತನ ಕಥೆ ಮುಗಿಸಿದ್ದಾನೆ. ಹಾಗಾದ್ರೆ ಆ ಮೇಯರ್​​ ಮಗ ಯಾರು..? ಆವತ್ತು ಬರ್ತಡೇ ಪಾರ್ಟಿಯಲ್ಲಿ ಏನೇನಾಯ್ತು..? ಬರ್ತಡೇ ಪಾರ್ಟಿಯಲ್ಲಿ ಆದ ಸಣ್ಣ ಗಲಾಟೆ ತಿಪ್ಪೆಸ್ವಾಮಿಯ ಹೆಣ ಬೀಳುವಂತೆ ಮಾಡಿಬಿಟ್ಟಿದೆ.

ಅಷ್ಟಕ್ಕೂ ಕೇವಲ ಜಾಗ ಬಿಡು, ಸೌಂಡ್​​ ಕಡಿಮೆ ಮಾಡು ಅಂದಿದ್ದಕ್ಕೆ ರಘು ಆ್ಯಂಡ್​​ ಗ್ಯಾಂಗ್​ ತಿಪ್ಪೆಸ್ವಾಮಿಯನ್ನ ಮುಗಿಸಿಬಿಡ್ತಾ..? ನೋ ಅಲ್ಲಿ ಹಣದ ವ್ಯವಹಾರ ಕೂಡ ತಳುಕು ಹಾಕಿಕೊಳ್ತಿದೆ.. ಹಾಗಾದ್ರೆ ಏನದು ವ್ಯವಹಾರ..? ಅವರೆಲ್ಲಾ ಒಂದು ಕಾಲದ ಸ್ನೇಹಿತರೇ.. ಆದ್ರೆ ಯಾವಾಗ ರಘು ಮತ್ತು ಆತನ ಸಹೋದರ ಸೇರಿಕೊಂಡು ತಿಪ್ಪೆಸ್ವಾಮಿಯ ಕಥೆ ಮುಗಿಸಿದ್ರೋ ಈಗ ಒಂದೊಂದೇ ಕಾರಣಗಳು ಹೊರಬರುತ್ತಿವೆ.. ಅದರಲ್ಲಿ ಒಂದು ಸಾಲದ ಹಣ... ಅದೇ ಸಾಲದ ಹಣಕ್ಕಾಗಿ ಕೆಲ ತಿಂಗಳುಗಳಿಂದ ರಘು ತಿಪ್ಪೆಸ್ವಾಮಿ ವಿರುದ್ಧ ಕತ್ತಿ ಮಸೆಯುತ್ತಲೇ ಇದ್ದ.. ಆದರೆ ಆವತ್ತು ತಿಪ್ಪೆಸ್ವಾಮಿ ಒಬ್ಬಂಟಿಯಾಗಿ ತಗ್ಲಾಕಿಕೊಂಡುಬಿಟ್ಟಿದ್ದ. ಅಧಿಕಾರದ ಮದ, ದುಡ್ಡಿನ ಆಹಂ,ರಾಜಕೀಯ ನಂಟಿನ ಸೊಂಕಿನಿಂದ ಡಿಜಿ ಹಾಕಿಕೊಂಡು ತಲವಾರ ಹಿಡಿದುಕೊಂಡು ಏರಿಯಾದಲ್ಲಿ ಅಬ್ಬರ ಸೃಷ್ಠಿ ಮಾಡಲು ಹೋದ ಮಾಜಿ ಮೇಯರ್ ಮಗ ರಘು ಮತ್ತವರ ಸಹೋದರ ರಾಜು ಜೈಲು ಪಾಲಾಗಿದ್ಧಾರೆ. 

Related Video