JUSTICE IS DUE ಹೆಣ್ಣು ಮಕ್ಕಳಿಗೆ ಇರೋ ನ್ಯಾಯ ಗಂಡಸರಿಗೆ ಯಾಕಿಲ್ಲ!

ಬೆಂಗಳೂರಿನಲ್ಲಿ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಮಗನಿಗೆ ಗಿಫ್ಟ್ ಬಾಕ್ಸ್, 24 ಪುಟಗಳ ಡೆತ್ ನೋಟ್ ಮತ್ತು ಕೊನೆಯ ಮೂರು ದಿನಗಳ ಟೈಂ ಟೇಬಲ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಡಿ.11): ಅವನು ದೂರದ ಉತ್ತರ ಪ್ರದೇಶದವನು. ಎರಡೂವರೆ ವರ್ಷದ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದ. ಖಾಸಗಿ ಕಂಪನಿಯಲ್ಲಿ ಕೆಲಸ.. ಬಾಡಿಗೆ ಮನೆಯಲ್ಲಿ ವಾಸ. ಹೆಂಡತಿ ಮಗು ಉತ್ತರ ಪ್ರದೇಶದಲ್ಲೇ ಇದ್ರೂ, ಇಲ್ಲಿ ಈತ ಒಂಟಿಯಾಗಿದ್ದ.

ಆದರೆ, ಆವತ್ತು ಇದ್ದಕ್ಕಿದಂತೆ ಆತ ಸೂಸೈಡ್​​​ ಮಾಡಿಕೊಂಡ. ತನ್ನವರಿಗೆಲ್ಲಾ ಲಾಸ್ಟ್​​ ಮೆಸೆಜ್​​ ಕಳಿಸಿ ತನ್ನದೇ ಮನೆಯಲ್ಲಿ ನೇಣಿಗೆ ಶರಣಾಗಿದ್ದ. ಇನ್ನೂ ಪೊಲೀಸರು ಆ ಮನೆಗೆ ಎಂಟ್ರಿ ಕೊಟ್ಟಾಗ ಅಲ್ಲಿ ಕಂಡಿದ್ದು ಆತ ತನ್ನ ಪ್ರೀತಿಯ ಮಗನಿಗೆ ರೆಡಿ ಮಾಡಿದ್ದ ಗಿಫ್ಟ್​​ ಬಾಕ್ಸ್​​. 24 ಪುಟಗಳ ಡೆತ್​​ ನೋಟ್​​ ಮತ್ತು ಕೊನೆಯ ಮೂರು ದಿನದ ಟೈಂ ಟೇಬಲ್​​​. ಇಷ್ಟು ಪ್ರಿಪೇರ್​​ ಆಗಿ ಸೂಸೈಡ್​​ ಮಾಡಿಕೊಂಡ ಆತ ಯಾರು..? ಅಷ್ಟು ರೆಡಿಯಾಗಿ ಸತ್ತಿದ್ದಾನೆ ಅಂದ್ರೆ ಅವನ ಮನಸ್ಥಿತಿ ಹೇಗಿರಬೇಕು..? 

Justice is Due ಎಂದು ಬರೆದು ಸಾವಿಗೆ ಶರಣಾದ ಯುವಕನ 12 ಕೊನೆಯ ಆಸೆ, ಈಡೇರಿಸುತ್ತಾ ನಮ್ಮ ಸಮಾಜ?

ಹಣ ಅಂತಸ್ತು ಏನೇ ಇದ್ರೂ ಮನುಷ್ಯನಿಗೆ ಜೀವನದಲ್ಲಿ ನೆಮ್ಮದಿ ಮುಖ್ಯ. ಆ ನೆಮ್ಮದಿಯೇ ಇಲ್ಲ ಅಂದ್ರೆ ಏನಿದ್ರು ಏನು ಫಲ.. ಅತುಲ್ ಜೀವನದಲ್ಲಿ ಕೊರತೆಯಾಗಿದ್ದು ಕೂಡ ಇದೇ.. ಇಷ್ಟ ಪಟ್ಟು ಮದುವೆಯಾದವಳೇ ಇವನನ್ನ ಸಾಯಿ ಅಂದುಬಿಟ್ಟಳು.. ತನ್ನ ಮಗುವನ್ನ ನೋಡೋದಕ್ಕೆ ರೇಟ್​​ ಫಿಕ್ಸ್​​​ ಮಾಡಿದ್ಲು... ಇನ್ನೂ ಕೋರ್ಟ್​ನಲ್ಲಿ ನ್ಯಾಯ ಸಿಗುತ್ತೆ ಅಂದ್ರೆ ಅಲ್ಲೂ ಆತನಿಗೆ ಆಗಿದ್ದು ವಿಚಿತ್ರ ಅನುಭವ. ಇದನ್ನೆಲ್ಲಾ ಅನುಭಿಸಿದ ಆತ ಬದುಕೋದಕ್ಕಿಂತ ಸಾಯೋದೇ ಲೇಸು ಅಂದುಕೊಂಡ.

ಅತುಲ್‌ ಸುಭಾಷ್‌ ಸಾವಿನ ಬೆನ್ನಲ್ಲೇ, ವರದಕ್ಷಿಣೆ ಕೇಸ್‌ಗಳ ಬಗ್ಗೆ ಸುಪ್ರೀಂ ಕೋರ್ಟ್‌ ಖಡಕ್‌ ಮಾತು!

Related Video