ಗೆಳೆಯನ ತಂಗಿ ಹುಟ್ಟುಹಬ್ಬಕ್ಕೆ ವಿಶ್‌ ಮಾಡಿದ್ದ ಸ್ನೇಹಿತರು: ಕರಳು ಹಿಂಡುತ್ತೆ ಒಬ್ಬೊಬ್ಬರ ಸಾವಿನ ಕಥೆ..!

ಗೆಳೆಯನ ತಂಗಿ ಹುಟ್ಟುಹಬ್ಬಕ್ಕೆ ಒಂದೇ ಫ್ರೇಮ್‌ನಲ್ಲಿ ಫೋಟೋ ಹಾಕಿ ವಿಶ್‌ ಮಾಡಿದ್ದ ಗೆಳೆಯರು ಕೆಲವೇ ಹೊತ್ತಿನಲ್ಲಿ ಮಸಣ ಸೇರಿರುವ ಘಟನೆ ಅತ್ತಿಬೆಲೆಯಲ್ಲಿ ನಡೆದಿದೆ.
 

Share this Video
  • FB
  • Linkdin
  • Whatsapp

ಅತ್ತಿಬೆಲೆಯ ಪಟಾಕಿ ದುರಂತದಲ್ಲಿ(Attibele fire incident) ಇಲ್ಲಿತನಕ 14 ಮಂದಿ ಸಜೀವ ದಹನವಾಗಿದ್ದಾರೆ. ಇದರಲ್ಲಿ ಮೃತಪಟ್ಟ 6 ಯುವಕರು ಆತ್ಮೀಯ ಗೆಳೆಯರಾಗಿದ್ದಾರೆ. ಇವರು ಸಾಯುವ ಮುಂಚೆ ಗೆಳೆಯನ ತಂಗಿ ಹುಟ್ಟುಹಬ್ಬಕ್ಕೆ(birthday) ವಿಶ್‌ನನ್ನು ಸಹ ಮಾಡಿದ್ದರು. ಒಂದೇ ಫ್ರೇಮ್‌ನಲ್ಲಿ ಫೋಟೋ(Photo) ಹಾಕಿಕೊಂಡು ವಿಶ್‌ ಮಾಡಿದ್ದರು ಎಂದು ತಿಳಿದುಬಂದಿದೆ. ಈ ಘಟನೆ ಆಗೋ ಮುನ್ನ ಇವರೆಲ್ಲಾ ಹೀಗೆ ಮಾಡಿದ್ದರು ಎಂದು ತಿಳಿದುಬಂದಿದೆ. ಆದ್ರೆ ಇವರೆಲ್ಲಾ ಈಗ ಮೃತಪಟ್ಟಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ಮೇಲೆ ಎಫ್ಐಆರ್(Fir) ದಾಖಲು ಮಾಡಲಾಗಿದೆ. ಐಪಿಸಿ 427, 285, 286, 304 ಆಕ್ಟ್ನಡಿ ಪ್ರಕರಣ ದಾಖಲಾಗಿದ್ದು, ಗೋಡನ್ ಮಾಲೀಕ ಸೇರಿದಂತೆ ನಾಲ್ವರ ವಿರುದ್ಧ ಕೇಸ್ ಹಾಕಲಾಗಿದೆ. ಗೋಡನ್ ಮಾಲೀಕ ರಾಮಸ್ವಾಮಿ ರೆಡ್ಡಿ ಎ1, ನವೀನ್ ರೆಡ್ಡಿ ಎ2, ಮ್ಯಾನೇಜರ್ ಲೋಕೇಶ್ ಎ 3, ಜಯಮ್ಮ ಕಟ್ಟಡ ಮಾಲೀಕರು ಎ 4, ಅನಿಲ್ ರೆಡ್ಡಿ ಎ5 ಆರೋಪಿಗಳೆಂದು ಎಫ್ಐಆರ್ ದಾಖಲು ಮಾಡಲಾಗಿದೆ. ಮೃತರ ಸಂಬಂಧಿ ಲೋಕೇಶ್ವರನ್ ದೂರಿನ ಮೇರೆಗೆ ಕೇಸ್ ದಾಖಲಾಗಿದೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ನೀವು ಮಹತ್ತರ ಕಾರ್ಯ ಸಾಧಿಸದಿರಲು ಈ 6 ವಿಘ್ನಗಳೇ ಕಾರಣ ?

Related Video