Drug Mafia: ರಾಜ್ಯದಲ್ಲಿ ಗಾಂಜಾ ಸಾಗಾಟ ಧಂದೆಗೆ ಪೊಲೀಸರೇ ಕಿಂಗ್‌ ಪಿನ್!‌

*ರಾಜ್ಯದಲ್ಲಿ ಗಾಂಜಾ ಸಾಗಾಟ ಧಂದೆಗೆ ಪೊಲೀಸರೇ ಕಿಂಗ್‌ ಪಿನ್!‌ 
*ಸಿಎಂ ನಿವಾಸದ ಬಳಿಯೇ ಗಾಂಜಾ ಧಂದೆಗಿಳಿದ ಪೋಲಿಸರು
*ಕೋರಮಂಗಲ ಠಾಣೆ ಸಿಬ್ಬಂದಿ  ಶಿವಕುಮಾರ್‌, ಸಂತೋಷ್‌  ಅಂದರ್‌
 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 18): ರಾಜ್ಯದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ (Basavaraj Bommai) ನಿವಾಸ ಬಳಿಯೇ ಪೊಲೀಸರು ಡ್ರಗ್ಸ್ ದಂಧೆಗಿಳಿದಿರುವ (Drug Mafia) ಆತಂಕಕಾರಿ ಸಂಗತಿ ಬಯಲಾಗಿದೆ. ರಾಜ್ಯದಲ್ಲಿ ಗಾಂಜಾ ಸಾಗಾಟ ಧಂದೆಗೆ ಪೊಲೀಸರೇ ಕಿಂಗ್‌ ಪಿನ್ ಎಂಬ ಎಕ್ಸ್‌ಕ್ಲ್ಯೂಸಿವ್‌ ಮಾಹಿತಿ ಈಗ ಹೊರಬಿದ್ದಿದೆ. ಕೋರಮಂಗಲ (Koramangala) ಠಾಣೆ ಸಿಬ್ಬಂದಿ ಶಿವಕುಮಾರ್‌, ಸಂತೋಷ್‌ ಮೋಸ್ಟ್‌ ವಾಂಟೆಡ್‌ ಪೆಡ್ಲರ್‌ ಜತೆ ಗಾಂಜಾ ಧಂದೆಗಿಳಿದ ಪೊಲೀಸರು. ಆರ್‌ ಟಿ ನಗರದ 80 ಅಡಿ ರಸ್ತೆ ಬಳಿ ಡೀಲ್‌ಗೆ ಇಳಿದಿದ್ದ ಪೊಲೀಸರನ್ನು ಸೇರಿ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. 

ಇದನ್ನೂ ಓದಿDrugs Mafia| ಬೆಂಗಳೂರಿಂದ ತಿರುವನಂತಪುರ, ವೆಲ್ಲೂರಿಗೆ ಕೊರಿಯರ್‌ನಲ್ಲಿ ಡ್ರಗ್ಸ್‌..!

ಸಿಎಂ ಮನೆಯಿಂದ 100 ಮೀಟರ್‌ ದೂರವಿರುವ ಹಿಂಬದಿಯಲ್ಲಿರುವ ರಸ್ತೆಯಲ್ಲಿ ಈ ಘಟನೆ ನಡೆದಿದ್ದು ಗಾಂಜಾ ಬೆಲೆ ಎಷ್ಟು ನಿಗದಿ ಮಾಡಬೇಕು ಎಂಬ ಬಗ್ಗೆ ಪೊಲೀಸರು ಚರ್ಚಿಸುತ್ತಿದ್ದರು ಎಂದು ಹೇಳಲಾಗಿದೆ. ಈ ವೇಳೆ ಮಾತಿನ ಚಕಮಕಿಯಾದಾಗ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರ್‌ ಟಿ ನಗರ ಪೊಲೀಸರು ಬಂದು ಪರಿಶೀಲಿಸಿ ವಿಚಾರಣೆ ನಡೆಸಿದಾಗ ಪೆಡ್ಲರ್‌ ಬಳಿ ಗಾಂಜಾ ಪಡೆದು ಪೊಲೀಸರೇ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ಬೆನ್ನಲ್ಲೇ ಈಗ ಪ್ರಕರಣ ದಾಖಲಾಗಿದ್ದು ಪೋಲಿಸರನ್ನು ಬಂಧಿಸಲಾಗಿದೆ.

Related Video