Suvarna FIR: ವಿಜಯಪುರ,  ಹಗಲಿಗೆ ಐಪೋನ್ ಜಾರ್ಜರ್‌ ಕೇಳಿ ರಾತ್ರಿ ಮನೆ ದೋಚುತ್ತಾರೆ...!

* ಭೀಮಾತೀರದಲ್ಲಿ ಜೋರಾಯ್ತು ಕಳ್ಳರ ಹಾವಳಿ
* ಚಳಿ ಜೋರಾದಂತೆ ಕಳ್ಳರ ಆರ್ಭಟವೂ ಜೋರು
* ಮನೆ ಬಾಗಿಲು ಭದ್ರ ಮಾಡಿಕೊಳ್ಳುವುದೇ ದೊಡ್ಡ ಸಾಹಸ
* ಬಾಗಿಲು ಮುರಿದು ಮನೆ ಒಳಗೆ ನುಗ್ಗುತ್ತಾರೆ 

First Published Dec 28, 2021, 4:50 PM IST | Last Updated Dec 28, 2021, 4:50 PM IST

ವಿಜಯಪುರ( ಡಿ. 28)  ಅಪರಾಧ ಜಗತ್ತಿನ (Crime News) ಪ್ರಕರಣಗಳಿಗೆ ಕೊನೆ ಇಲ್ಲ. ವರ್ಷದ ಕೊನೆ ಬರುತ್ತಿದ್ದಂತೆ ಚಳಿ ಹೆಚ್ಚಾಗುತ್ತಿದ್ದೆ. ಆದರೆ ಇಲ್ಲಿ ಜನ ಚಳಿ (Winter)ಹೆಚ್ಚಾಗುತ್ತಿದ್ದಂತೆ ಜನ ಬೆವರುತ್ತಿದ್ದಾರೆ. ಚಳಿಯ ನಡುವೆ ಶುರುವಾಗಿರುವ ಖತರ್‌ ನಾಕ್ ಖದೀಮರ (Robber) ಹಾವಳಿಗೆ ಜನ ಹೈರಾಣವಾಗಿದ್ದಾರೆ.

Gang Robbery : ಮನೆಗೆ ನುಗ್ಗಿದ ಗ್ಯಾಂಗ್ ದರೋಡೆ : ವ್ಯಾಪಾರಿಯ ಅರೆ ನಗ್ನಗೊಳಿಸಿದ ಮಹಿಳೆಯರು

ಉತ್ತರ ಕರ್ನಾಟಕ ಭಾಗದಲ್ಲಿ(Uttara Karnataka) ಈ ತಂಡ ಭಯ ಹುಟ್ಟಿಸಿದೆ.  ರಾತ್ರಿಯಾದರೆ ಜನ ಆತಂಕದ  ನಡುವೆಯೇ ನಿದ್ರೆ ಮಾಡುವಂತಾಗಿದೆ. ನಿಗೂಢ ರಹಸ್ಯ ಸಿನಿಮಾದಂತಾಗಿದೆ ಜೀವನ.  ಭೀಮಾತೀರದ ವಿಜಯಪುರದ (Vijayapura) ಜನರು ಕಳ್ಳರ ಕಾಟಕ್ಕೆ ಬೇಸತ್ತು ಹೋಗಿದ್ದಾರೆ.