ಶಿವಮೊಗ್ಗ; ಅವೆಂಜರ್ ಬೈಕ್‌ ನಲ್ಲಿ ಬಂದಿದ್ದಕ್ಕೆ ಅಮಾಯಕ ಕೊಲೆಯಾದ!

* ಶಿವಮೊಗ್ಗದ ಭಯಾನಕ ಕೊಲೆ ಮತ್ತು ಅವೆಂಜರ್ ಬೈಕ್
* ಯಾರನ್ನೋ ಕೊಲೆ ಮಾಡಲು  ಹೋಗಿ ಇನ್ಯಾರನ್ನೋ ಮುಗಿಸಿದ್ರು
* ಅಮಾಯಕ ಸಂತೋಷ್ ಹತ್ಯೆಯಾಗಿದ್ದ
* ಅವೆಂಜರ್ ಬೈಕ್  ನೋಡಿ ಅಮಾಯಕನ  ಹತ್ಯೆ ಮಾಡಿದ್ರು

First Published Oct 21, 2021, 4:17 PM IST | Last Updated Oct 21, 2021, 4:17 PM IST

ಶಿವಮೊಗ್ಗ(ಅ. 21) ಒಂದು ಕೊಲೆಯ (Murder) ಸ್ಕೆಚ್.. ಮತ್ತು ಅವೆಂಜರ್ ಬೈಕ್.. ಕಾದು ಕುಳಿತಿದ್ದ ಹಂತಕರು.. ಯಾರನ್ನೋ ಕೊಲೆ ಮಾಡಲು ಹೋಗಿ ಇನ್ನು ಯಾರನ್ನೋ ಹತ್ಯೆ ಮಾಡಿದ್ದರು. ಕೊಲೆಯಾಗಬೇಕಿದ್ದವ (Suvarna FIR) ಜೈಲಿನಲ್ಲಿದ್ದರೆ ಅಮಾಯಕ ಬಲಿಯಾಗಿದ್ದ. ಮಿಸ್ಟೇಕ್..

ಪಿಯು ಹುಡುಗನ ಜತೆ ಗೃಹಿಣಿ ಸಂಬಂಧ.. ಕೊಲೆ ಆಗೋಯ್ತು!

ವಿಜಯದಶಮಿ ದಿನ ಶಿವಮೊಗ್ಗದ (Shivamogga) ಕೋಟೆ ಪೊಲೀಸರಿಗೆ ಒಂದು ಮಾಹಿತಿ ಬಂದಿತ್ತು. ಬೈಕ್ ಸವಾರ ಸ್ಥಳದಲ್ಲಿಯೇ ಬಿದ್ದಿದ್ದಾನೆ ಎಂಬ ಮಾಹಿತಿ ಅದು. ಹೋಗಿ ನೋಡಿದರೆ ನೆತ್ತರ ನಡುವೆ ಯುವಕ ಹೆಣವಾಗಿದ್ದ.  ಹಾಗಾದರೆ ಯಾರನ್ನು ಕೊಲೆ ಮಾಡಲು ಹಂತಕರು ಸಂಚು ರೂಪಿಸಿದ್ದರು?