ಜಮಖಂಡಿ ಜಮೀನು ವಿವಾದ;  ಅರ್ಧ ಗಂಟೆಯಲ್ಲಿ ನಾಲ್ಕು ಕೊಲೆ!

* ಇದೊಂದು ಭಯಾನಕ ಸ್ಟೋರಿ
* ಒಂದೆ ಜಾಗದಲ್ಲಿ ನಾಲ್ಕು ಹೆಣ ಬಿದ್ದಿತ್ತು
* ಜಮೀನು ವಿವಾದ ನಾಲ್ಕು ಹತ್ಯೆಯಲ್ಲಿ ಅಂತ್ಯವಾಯಿತು
* ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ

First Published Sep 1, 2021, 7:52 PM IST | Last Updated Sep 1, 2021, 7:52 PM IST

ಬಾಗಲಕೋಟೆ(ಸೆ. 01) ಅಪರಾಧ ಜಗತ್ತಿನಲ್ಲಿ ಸುದ್ದಿಗಳಿಗೆ ಬರವಿಲ್ಲ. ಒಂದು ತೋಟದ ಶೆಡ್.. ಎದುರಿನಲ್ಲಿ ನಾಲ್ಕು ಹೆಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಲ್ಲಿ ಸತ್ತವರೆಲ್ಲ ಒಂದೇ ಕುಟುಂಬದವರು. ಮೂರು ಎಕರೆ ಜಮೀನು.. 24 ಗುಂಟೆ ವಿವಾದ..ನಿಮಿಷದ ಅಂತರದಲ್ಲಿ ಸಹೋದರರ ಹತ್ಯೆ. ಕೂದಲೆಳೆಯಲ್ಲಿ ತಪ್ಪಿಸಿಕೊಂಡ ತಾಯಿ ಮಕ್ಕಳು.

ಪೆಟ್ರೋಲ್ ಕಳ್ಳತನ ಮಾಡಿದ್ದನ್ನು ನೋಡಿದ ಯುವಕನ ಹತ್ಯೆ!

ಮೂವತ್ತು ನಿಮಿಷದಲ್ಲಿ ನಾಳ್ಕು ಕೊಲೆ. ಬಾಗಲಕೋಟೆ ಜಿಲ್ಲೆಯ ಗ್ರಾಮವೊಂದರ ಸ್ಟೋರಿ.  ಕೃಷಿ ಅವಲಂಬಿಸಿರುವ ಕುಟುಂಬಗಳೆ ಹೆಚ್ಚು. ಬಾಲಕನೊಬ್ಬ ಪೊಲೀಸ್ ಪೇದೆಗೆ ಕರೆ ಮಾಡಿ ಅಪ್ಪ-ದೊಡ್ಡಪ್ಪನ ಹತ್ಯೆ ಮಾಡಿದ್ದಾರೆ ಎಂದು ಅಳುತ್ತಲೇ ಹೇಳಿದ್ದ.  ಆತುರದಿಂದ ಸ್ಥಳಕ್ಕೆ ಬಂದು ನೋಡಿದಾಗ ಹೆಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.