ಡಿಕೆ ಬ್ರದರ್ಸ್ ಹೆಸರೇ ಬಂಡವಾಳ, ಶ್ರೀಮಂತರಿಗೆ ಗಾಳ: ಬಗೆದಷ್ಟು ಬಯಲಾಗ್ತಿದೆ ಐಶ್ವರ್ಯ ವಂಚನೆ ಪುರಾಣ
ಡಿ.ಕೆ ಸುರೇಶ್ ಹೆಸರನ್ನೇ ಬಂಡವಾಳ ಮಾಡಿಕೊಂಡಿದ್ದ ವಂಚಕಿ, ಶ್ರೀಮಂತರನ್ನೇ ಟಾರ್ಗೆಟ್ ಮಾಡಿಕೊಂಡಿದ್ದಳು. ಈಕೆ ಮೋಸದ ಜಾಲಕ್ಕೆ ವೈದ್ಯೆಯೊಬ್ಬರು ಸಿಲುಕಿ 5 ಕೋಟಿ ಕಳೆದುಕೊಂಡಿರೋದು ಸದ್ಯ ಬೆಳಕಿಗೆ ಬಂದಿದೆ. ಸ್ತ್ರೀರೋಗ ತಜ್ಞೆ ಮಂಜುಳಾ ಪಾಟೀಲ್ಗೆ ಐಶ್ವರ್ಯ ಗೌಡ ವಂಚನೆ ಎಸಗಿದ್ದಾಳೆ.
ಬೆಂಗಳೂರು(ಜ.08): ಡಿಕೆ ಬ್ರದರ್ಸ್ ತಂಗಿ ಎಂದು ಹೇಳಿಕೊಂಡು ವಂಚಿಸಿದ್ದ ಐಶ್ವರ್ಯ ಗೌಡ ವಂಚನೆ ಕಹಾನಿ ಬಗೆದಷ್ಟು ಬಯಲಾಗ್ತಿದೆ. ಈಕೆಯನ್ನ ನಂಬಿ ಕೋಟಿ ಕೋಟಿ ಹಣ ನೀಡಿದವರು ಕಂಗಾಲಾಗಿದ್ದಾರೆ. ಸದ್ಯ ಮಾಜಿ ಮಿನಿಸ್ಟರ್ಗೂ ಈ ಚಾಲಾಕಿ ನಂಟಿರೋದು ಬೆಳಕಿಗೆ ಬಂದಿದೆ.
ಐಶ್ವರ್ಯ ಗೌಡ.. ಬ್ರ್ಯಾಂಡೆಂಡ್ ಬಟ್ಟೆ ತೊಟ್ಟು..ಹೈ-ಫೈ ಕಾರಿನಲ್ಲಿ ಓಡಾಡ್ತ ಅದೆಷ್ಟು ಜನರಿಗೆ ಈ ವಂಚಕಿ ಪಂಗನಾಮ ಹಾಕಿದ್ದಾಳೋ ಗೊತ್ತಿಲ್ಲ. ಒಂದರ ನಂತರ ಮತ್ತೊಂದರಂತೆ ಐಶ್ವರ್ಯ ವಂಚನೆ ಪ್ರಕರಣಗಳು ಬೆಳಕಿಗೆ ಬರ್ತಿವೆ.
ಡಿ.ಕೆ ಸುರೇಶ್ ಹೆಸರನ್ನೇ ಬಂಡವಾಳ ಮಾಡಿಕೊಂಡಿದ್ದ ವಂಚಕಿ, ಶ್ರೀಮಂತರನ್ನೇ ಟಾರ್ಗೆಟ್ ಮಾಡಿಕೊಂಡಿದ್ದಳು. ಈಕೆ ಮೋಸದ ಜಾಲಕ್ಕೆ ವೈದ್ಯೆಯೊಬ್ಬರು ಸಿಲುಕಿ 5 ಕೋಟಿ ಕಳೆದುಕೊಂಡಿರೋದು ಸದ್ಯ ಬೆಳಕಿಗೆ ಬಂದಿದೆ. ಸ್ತ್ರೀರೋಗ ತಜ್ಞೆ ಮಂಜುಳಾ ಪಾಟೀಲ್ಗೆ ಐಶ್ವರ್ಯ ಗೌಡ ವಂಚನೆ ಎಸಗಿದ್ದಾಳೆ. ಆಸ್ಪತ್ರೆಗೆ ಚಿಕಿತ್ಸೆಗೆ ಬಂದಾಗ ಮಂಜುಳಾಗೆ ಐಶ್ವರ್ಯ ಗೌಡ ಪರಿಚಯವಾಗಿದೆ. ಐಶ್ವರ್ಯ ತಾನು ಡಿ.ಕೆ ಸುರೇಶ್ ತಂಗಿ ಎಂದು ಹೇಳಿಕೊಂಡಿದ್ದಳು. ಗೋಲ್ಡ್ ಬ್ಯುಸಿನೆಸ್, ರಿಯಲ್ ಎಸ್ಟೇಟ್ ಮಾಡ್ತಿರೋದಾಗಿ ಕಥೆ ಕಟ್ಟಿದ್ದ ಚಾಲಾಕಿ, ಹೂಡಿಕೆ ಮಾಡಿ ಅಂತಾ ಹಣ ಪೀಕಿದ್ದಳು. 2.5 ಕೋಟಿ ಬೆಲೆ ಬಾಳುವ 2 ಕೆಜಿ 350 ಗ್ರಾಂ ಚಿನ್ನ ಪಡೆದುಕೊಂಡಿದ್ದಳು. ನಗದು ಸೇರಿದಂತೆ ವೈದ್ಯೆ ಮಂಜುಳಾಗೆ ಒಟ್ಟು 5 ಕೋಟಿ ರೂ. ವಂಚಿಸಲಾಗಿದೆ.
News Hour: ಕಾಂಗ್ರೆಸ್‌ನಲ್ಲಿ ಈಗ ‘ಪವರ್’ ಫೈಟ್..!
ವಂಚನೆ ಮಾಡಿರೋದು ಮಾತ್ರವಲ್ಲ. ಪೊಲೀಸರಿಗೆ ಏನಾದ್ರೂ ದೂರು ನೀಡಿದ್ರೆ ಅಷ್ಟೇ ಅಂತಾ ವೈದ್ಯೆ ಮಂಜುಳಾಗೆ ಬೆದರಿಕೆ ಹಾಕಿದ್ದಾಳೆ. ಈ ಬಗ್ಗೆ RR ನಗರ ಠಾಣೆಯಲ್ಲಿ ಐಶ್ವರ್ಯ ವಿರುದ್ಧ FIR ದಾಖಲಾಗಿದೆ.
ಮಾಜಿ ಸಚಿವ ವಿನಯ್ ಕುಲಕರ್ಣಿಗೂ ಐಶ್ವರ್ಯ ಗೌಡ ನಂಟಿರುವುದು ಬೆಳಕಿಗೆ ಬಂದಿದೆ. ವಂಚಕಿ ಐಶ್ವರ್ಯ ಪತಿ ಹೆಸರಿನಲ್ಲಿರುವ ಕಾರನ್ನ ವಿನಯ್ ಕುಲಕರ್ಣಿ ಬಳಸುತ್ತಿದ್ದು, RR ನಗರ ಪೊಲೀಸರ ತನಿಖೆಯಲ್ಲಿ ಈ ಸಂಗತಿ ಬಯಲಾಗಿದೆ. ಅಷ್ಟು ಮಾತ್ರವಲ್ಲ ಯೋಗೀಶ್ಗೌಡ ಕೊಲೆ ಪ್ರಕರಣದ A5 ಆರೋಪಿ ಅಶ್ವತ್ಥ್ ಗೌಡ, ವಂಚಕಿ ಐಶ್ವರ್ಯ ಕಾರು ಚಾಲಕನಾಗಿ ಕೆಲಸ ಮಾಡ್ತಿದ್ದಾನೆ. ಹೀಗಾಗಿ ವಂಚನೆ ಕೇಸ್ನಲ್ಲಿ ವಿನಯ್ ಕುಲಕರ್ಣಿಗೂ ತನಿಖೆ ಬಿಸಿ ತಟ್ಟುವ ಸಾಧ್ಯತೆಯಿದೆ.
ಡಿ.ಕೆ ಸುರೇಶ್ ಹೆಸರಲ್ಲಿ ಐಶ್ವರ್ಯ ವಂಚನೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದು, ಯಾವ ಐಶ್ವರ್ಯ ಗೌಡನೂ ಗೊತ್ತಿಲ್ಲ ಅಂತಾ ಸ್ಪಷ್ಟನೆ ನೀಡಿದ್ರು. ಚಿನ್ನಾಭರಣದ ಉದ್ಯಮಿಯಂತೆ ಬಿಲ್ಡಪ್ ಕೊಡ್ತಿದ್ದ ಐಶ್ವರ್ಯ ತನ್ನ ಬಣ್ಣದ ಮಾತಿನಿಂದಲೇ ಜನರಿಗೆ ಮಕ್ಮಲ್ ಟೋಪಿ ಹಾಕಿದ್ದಾಳೆ. ಪ್ರಕರಣದ ತನಿಖೆ ನಡೆದಂತೆಲ್ಲ ದೊಡ್ಡ ದೊಡ್ಡವರ ಹೆಸರು ಮುನ್ನಲೆಗೆ ಬರ್ತಿವೆ. ವಂಚನೆ ಉರಳು ಇನ್ನು ಯ್ಯಾರ ಕೊರಳಿಗೆ ಸುತ್ತಿಕೊಳ್ಳುತ್ತೋ ಕಾದು ನೋಡಬೇಕಿದೆ.