Asianet Suvarna News Asianet Suvarna News

ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದ ಕುಟುಂಬ ಸರ್ವನಾಶ! ಹೆಂಡತಿ- ಮಗುವಿಗೆ ಚಾಕು ಚುಚ್ಚಿದ ಪಾಪಿ ತಂದೆ

ಎರಡು ಮಕ್ಕಳಿದ್ರೂ ಆಟೋ ಡ್ರೈವರ್ ಜೊತೆ ಲವ್..!
ಹೆಂಡತಿಯ ಮಗು ತನ್ನ ಮಗುವಲ್ಲ ಎಂದು ಗಂಡನ ಜಗಳ
ರಾಜಿ ಮಾಡಿಕೊಳ್ಳಲು ಹೋದವನು ಹೆಂಡತಿ ಮಗುವಿಗೆ ಚುಚ್ಚಿದ

ಬೆಂಗಳೂರು (ಮಾ.23): ಕೋಲ್ಕತ್ತಾದಿಂದ ಬೆಂಗಳೂರಿಗೆ ಜೀವನ ಕಟ್ಟಿಕೊಳ್ಳಲು ಬಂದಿದ್ದ ಕುಟುಂಬವೊಂದು, ಈಗ ಮರಳು ಸೃಷ್ಟಿಸಿಕೊಳ್ಳಾರದಂತೆ ಸರ್ವನಾಶವಾಗಿ ಹೋಗಿದೆ. ಕುಟುಂಬದ ಹೆಂಡತಿ ಮತ್ತು ಮಗಳನ್ನು ಗಂಡನೇ ಚಾಕು ಚುಚ್ಚಿ ಕೊಲೆ ಮಾಡಿದ್ದಾನೆ.

ಅದೊಂದು ಸುಂದರ ಕುಟುಂಬ ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು. ಮದುವೆಯಾಗಿ 13 ವರ್ಷ. ಕೊಲ್ಕತ್ತಾ ಮೂಲದ ಈ ಕುಟುಂಬ 10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿತ್ತು. ಆದರೆ, ಇಲ್ಲಿ ಮೂರು ವರ್ಷಗಳ ಚೆನ್ನಾಗಿಯೇ ಜೀವನ ಮಾಡಿಕೊಂಡಿದ್ದ ದಂಪತಿ ನಡುವೆ ಬಿರುಕು ಮೂಡಿಬಿಟ್ಟಿತ್ತು. ಹಾಲು ಜೇನಿನಂತಿದ್ದ ಗಂಡ ಹೆಂಡತಿ ಹಾವು ಮುಂಗೂಸಿಗಾಳಾಗಿ ಬಿಟ್ಟಿದ್ದರು. ಕಾರಣ ಆ ಫ್ಯಾಮಿಲಿಗೆ ಮತ್ತೊಬ್ಬನ ಎಂಟ್ರಿ ಆಗಿತ್ತು. ಗಂಡ ಕುಟುಂಬ ಸರಿಮಾಡಿಕೊಳ್ಳಲು ತನ್ನ ಶಕ್ತಿ ಮೀರಿ ಪ್ರಯತ್ನ ಮಾಡಿದನು. ಆದರೆ, ಅದು ಈಡೇರದಿದ್ದಾಗ ಕೊನೆಗೆ ಹೆಂಡತಿಯನ್ನೇ ಮುಗಿಸೋ ಹಂತಕ್ಕೆ ಹೋಗಿಬಿಟ್ಟ. ಹೀಗೆ ಬದುಕು ಕಟ್ಟಿಕೊಳ್ಳಲು ದೂರದ ಊರಿನಿಂದ ಬಂದ ಕುಟುಂಬವೊಂದು ಸರ್ವನಾಶವಾಗಿದೆ.

ಅನೈತಿಕ ಸಂಬಂಧಕ್ಕಾಗಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಬಂದ ಮಹಿಳೆ: ಪತಿಯಿಂದ ಚಾಕು ಇರಿದು ಕೊಲೆ

ತಬಸಂ ಮತ್ತು ಆಕೆಯ ಮಗು ಇಬ್ಬರಿಗೂ ಚಾಕು ಹಾಕಿದವರು ಯಾರು..? ಇದನ್ನ ತಿಳಿದುಕೊಳ್ಳೋಕೆ ಪೊಲೀಸರಿಗೆ ಹೆಚ್ಚು ಹೊತ್ತು ಬೇಕಿರಲಿಲ್ಲ. ಕಾರಣ ಅವತ್ತು ಆಕೆಯನ್ನ ಕೊಂದದನ್ನ ಅಕ್ಕಪಕ್ಕದ ಮನೆಯವರು ಕಣ್ಣಾರೆ ಕಂಡಿದ್ದರು. ಅಷ್ಟೇ ಅಲ್ಲ ಹಂತಕನನ್ನ ಅಲ್ಲಿನ ಜನಗಳೇ ಹಿಡಿದು ಒಂದು ರೂಮಿನಲ್ಲಿ ಕೂಡಿಹಾಕಿದ್ದರು. ಅಂದಹಾಗೆ ಅಮ್ಮ, ಮಗಳಿಗೆ ಚಾಕು ಹಾಕಿದ್ದು ಆಕೆಯ ಗಂಡ ಶೇಕ್‌ ಸುಹೇಲ್‌ ಆಗಿದ್ದಾನೆ.