Asianet Suvarna News Asianet Suvarna News

ಪ್ರಮೋಶನ್‌ನಿಂದ ಪ್ರೀತಿಯಲ್ಲಿ ಬಿರುಕು, ಲಾಸ್ಟ್ ಮೀಟ್ ನೆಪದಲ್ಲಿ ಪ್ರೇಯಸಿ ಕತೆ ಮುಗಿಸಿದ ಬಾಯ್‌ಫ್ರೆಂಡ್

ದೂರದ ಊರಿಗಳಿಂದ ಬಂದಿದ್ದ ಇಬ್ಬರು ಬೆಂಗಳೂರಿನಲ್ಲಿ ಪ್ರೀತಿಯಲ್ಲಿ ಬಿದ್ದಿದ್ದರುು. ಆದ್ರೆ ಸಿಕ್ಕ ಪ್ರಮೋಷ್‌ನಿಂದ ಇವರ ಪ್ರೀತಿ ಅಂತ್ಯಗೊಂಡಿದ್ದು ಮಾತ್ರವಲ್ಲ, ಯುವತಿ ಕೊಲೆಯಾಗಿದ್ದಾಳೆ.

ಆಕೆ ಹೈದ್ರಾಬಾದ್,ಈತ ಡೆಲ್. ಇಬ್ಬರಿಗೆ ಬೆಂಗಳೂರಲ್ಲಿ ಕೆಲಸ. ಪರಿಚಯ ಸ್ನೇಹವಾಗಿ ಪ್ರೀತಿಗೆ ತಿರುಗಿತ್ತು.. ಒಟ್ಟಿಗೆ ಜೀವನ ಮಾಡುತ್ತಿದ್ದರು . ಆದ್ರೆ ಅವರಿಬ್ಬರನ್ನ ಬೇರೆ ಮಾಡಿದ್ದು ಪ್ರಮೋಷನ್... ಪ್ರಮೋಷನ್ ಸಿಕ್ಕ ಹುಡುಗನಿಗೆ ಹೈದ್ರಾಬಾದ್‌ಗೆ ಟ್ರಾನ್ಸ್‌ಫರ್ ಆಗಿತ್ತು. ಇತ್ತ ಈಕೆ ಬೆಂಗಳೂರಿನಲ್ಲಿ ಒಂಟಿಯಾಗಿಬಿಟ್ಟಳು.. ಅವನಲ್ಲಿ ಇವಳಿಲ್ಲಿ ಅಂತಿದ್ದ ಆ ಲವ್ ಸ್ಟೋರಿಯಲ್ಲಿ ಬಿರುಗಾಳಿಯೇ ಬೀಸಿಬಿಟ್ಟಿದೆ.. ಬೆಂಗಳೂರಿನ ಮನೆಯಲ್ಲಿ ಹೈದ್ರಾಬಾದಿ ಯುವತಿ ಮರ್ಡರ್ ಆಗಿದ್ದಾಳೆ. ಮರ್ಡರ್ ಮಾಡಿದವನು ಅವಳ ಲವ್ವರ್.. ಅಷ್ಟಕ್ಕೂ ಪ್ರೀತಿಸಿದವಳನ್ನೇ ಆತ ಕೊಂದಿದ್ದೇಕೆ..? ಅಂಥಹ ತಪ್ಪು ಆಕೆ ಮಾಡಿದ್ದೇನು..?