Kolar: ಅಂಗನವಾಡಿ ಕಾರ್ಯಕರ್ತೆಯಿಂದ ರಾಕ್ಷಸಿ ಕೃತ್ಯ: ಮಗುವಿಗೆ ಬೆಂಕಿಯಿಂದ ಸುಟ್ಟ ಸಹಾಯಕಿ!

ತಾಲ್ಲೂಕಿನ ಸಂತೇಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಿಡಘಟ್ಟ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಕಿರುಕುಳ ನೀಡಿ ಬೆಂಕಿಯಿಂದ ಸುಟ್ಟಿರುವ ಅಮಾನವೀಯ ಕೃತ್ಯ ನಡೆದಿದೆ. 

First Published Oct 20, 2024, 8:53 AM IST | Last Updated Oct 20, 2024, 8:53 AM IST

ಮಾಲೂರು (ಅ.20): ಜಿಲ್ಲೆಯ ಮಗುವಿಗೆ ಅಂಗನವಾಡಿ ಸಹಾಯಕಿ ರಾಕ್ಷಸಿಯಂತೆ ಬೆಂಕಿಯಿಂದ ಸುಟ್ಟಿರುವ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ. ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಸಂತೇಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಿಡಘಟ್ಟ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಕಿರುಕುಳ ನೀಡಿ ಬೆಂಕಿಯಿಂದ ಸುಟ್ಟಿರುವ ಅಮಾನವೀಯ ಕೃತ್ಯ ನಡೆದಿದೆ. ಅಂಗನವಾಡಿ ಸಹಾಯಕಿ ಶ್ರೀದೇವಿ ಪ್ರಪಂಚದ ಅರಿವೇ ಇಲ್ಲದ ಮುಗ್ಧ ಮಗುವಿಗೆ ಬೆಂಕಿಯಿಂದ ಸುಡುವ ಮೂಲಕ ರಾಕ್ಷಸಿಯಂತೆ ವರ್ತಿಸಿದ್ದಾರೆ. ನಿಡಘಟ್ಟ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ 17ಕ್ಕೂ ಹೆಚ್ಚು ಮಕ್ಕಳನ್ನ ಪೋಷಣೆ ಮಾಡುತ್ತಿದ್ದು ಮುನಿರಾಜು ಹಾಗೂ ಮುನಿಯಮ್ಮ ಅವರ ನಾಲ್ಕು ವರ್ಷದ ಹೆಣ್ಣು ಮಗುವಿನ ಕೈ ಮತ್ತು ಕುತ್ತಿಗೆ ಎದೆಯ ಭಾಗದಲ್ಲಿ ಬೆಂಕಿಯಿಂದ ಸುಟ್ಟ ಗಾಯಗಳಾಗಿದ್ದು ಅಂಗನವಾಡಿ ಸಹಾಯಕಿ ರಾಕ್ಷಸಿಯಂತೆ ವರ್ತಿಸಿ ಅಮಾನವೀಯ ಕೃತ್ಯವನ್ನು ಎಸಗಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

Video Top Stories