ದಂಡ ಕಟ್ತೇನೆ ಎಂದರೂ ಬಿಡದೆ ಟ್ರಾಫಿಕ್ ಪೊಲೀಸರ ಅಟ್ಯಾಕ್.. ಪ್ರಶ್ನೆ ಮಾಡಿದ ಯುವಕನಿಗೆ ಅವಾಜ್

*  ಮುಖ್ಯಮಂತ್ರಿಗಳೇ ಸೂಚನೆ ನೀಡಿದ್ದರೂ ಪಾಲಿಸದ ಟ್ರಾಫಿಕ್ ಪೊಲೀಸ್
* ಸಂದರ್ಶನ ಮುಗಿಸಿ ಬರುತ್ತಿದ್ದ ಯುವಕನ ತಡೆದು ಹಲ್ಲೆ
* ದಂಡ ಕಟ್ಟುತ್ತೇನೆ ಎಂದು ಹೇಳಿದರು ಬಿಡಲಿಲ್ಲ

Share this Video
  • FB
  • Linkdin
  • Whatsapp

ಬೆಂಗಳೂರು(ಫೆ. 09) ಟೋಯಿಂಗ್ ವಿಚಾರದಲ್ಲಿ ವಿವಾದ ಉಂಟಾಗಿ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರೇ ಸಭೆ ನಡೆಸಿದ್ದರು. ಪೊಲೀಸರು (Karnataka Police) ಜನರೊಂದಿಗೆ ಸೌಹಾರ್ದಯುತವಾಗಿ ವರ್ತಿಸಬೇಕು ಎಂದು ತಿಳಿಸಿದ್ದರು. 

Towing: ತುಮಕೂರಲ್ಲೂ ಮನಸೋ ಇಚ್ಛೆ ಟೋಯಿಂಗ್‌: ಸಾರ್ವಜನಿಕರ ಪ್ರಶ್ನೆಗೆ ತಬ್ಬಿಬ್ಬಾದ ಪೊಲೀಸರು..!

ಆದರೆ ಟ್ರಾಫಿಕ್ (Traffic Police) ಪೊಲೀಸರ ವರ್ತನೆಯಲ್ಲಿ ಅಂಥ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ. ಸಂದರ್ಶನ ಮುಗಿಸಿಕೊಂಡು ಬರುತ್ತಿದ್ದ ಯುವಕನ ತಡೆದ ವಿಜಯನಗರ ಸಂಚಾರಿ ಪೊಲೀಸರು ಆತನ ಬಳಿ ದಂಡ (Fine) ವಸೂಲಿಗೆ ಮುಂದಾಗಿದ್ದಾರೆ. ನಾನು ದಂಡ ಕಟ್ಟುತ್ತೇನೆ ಎಂದು ಹೇಳಿದ್ದರೂ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಯುವಕ ಆರೋಪಿಸಿದ್ದು ವಿಡಿಯೋ ಮಾಡಿಕೊಂಡಿದ್ದಾನೆ. 

Related Video