ನಟಿ ಚೆಂದನಾ ಆತ್ಮಹತ್ಯೆ ಹಿಂದಿನ ಅಸಲಿ ಕಾರಣ

 ಮೇ 28 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ    / ಯುವಕನ ಮೋಸಕ್ಕೆ ಬಲಿಯಾದ ನಟಿ/ ಸೆಲ್ಫಿ ವಿಡಿಯೋದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ/ ಮದುವೆಯಾಗೋದಾಗಿ ನಂಬಿಸಿ, ದೈಹಿಕವಾಗಿ ಬಳಸಿಕೊಂಡಿದ್ದ ಪ್ರಿಯಕರ 

First Published Jun 1, 2020, 6:17 PM IST | Last Updated Jun 1, 2020, 6:17 PM IST

ಬೆಂಗಳೂರು (ಜೂ. 01)  ಪ್ರಿಯಕರನಿಂದ ಮೋಸ ಹೋದ ಸ್ಯಾಂಡಲ್‍ವುಡ್‍ನ ಕಿರುತೆರೆ ನಟಿಯೊಬ್ಬರು ಸೆಲ್ಫಿ ವಿಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ತಾವರೆಕೆರೆಯ ಕೃಷ್ಣಮೂರ್ತಿ ಲೇಔಟ್‍ನಲ್ಲಿ  ಚಂದನಾ (29) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೋಸ ಮಾಡಿದ ಲವ್ವರ್, ಸೆಲ್ಫಿ ವಿಡಿಯೋ ಮಾಡಿಟ್ಟು ನಟಿ ಆತ್ಮಹತ್ಯೆ

ನಟಿ ಮನನೊಂದು ವಿಷ ಕುಡಿದಿದ್ದಾರೆ. ಮದುವೆಯಾಗೋದಾಗಿ ನಂಬಿಸಿ, ದೈಹಿಕವಾಗಿ ಪ್ರಿಯಕರ ಬಳಸಿಕೊಂಡಿದ್ದ ಎಂದು ವಿಡಿಯೋದಲ್ಲಿ ಆರೋಪ ಮಾಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ದಿನೇಶ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.