ಕಾಂಟ್ರವರ್ಸಿಗಳ ಕಿಂಗ್ ದರ್ಶನ್ ಅಂಡ್ ಗ್ಯಾಂಗ್; ರೇಣುಕಾಸ್ವಾಮಿ ಕೊಲೆ ಮಾಡಿ ಖಾಕಿ ಪಡೆಗೆ ಸರೆಂಡರ್!

ಆತ ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್​​ ಸ್ಟಾರ್​​.. ಅಭಿಮಾನಿಗಳ ಡಿ ಬಾಸ್​​​​... ಕಾಂಟ್ರವರ್ಸಿಗಳೇ ಆತನ ಮನೆ ದೇವರು.. ಪದೇ ಪದೇ ಪೊಲೀಸ್​​ ಠಾಣೆ ಮೆಟ್ಟಿಲ್ಲೇರುತ್ತಿದ್ದವನು ಇವತ್ತೂ ಕೂಡ ಪೊಲೀಸರ ಅತಿಥಿಯಾಗಿದ್ದಾನೆ..

First Published Jun 12, 2024, 2:57 PM IST | Last Updated Jun 12, 2024, 3:11 PM IST

ಬೆಂಗಳೂರು (ಜೂ.12): ಆತ ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್​​ ಸ್ಟಾರ್​​.. ಅಭಿಮಾನಿಗಳ ಡಿ ಬಾಸ್​​​​... ಕಾಂಟ್ರವರ್ಸಿಗಳೇ ಆತನ ಮನೆ ದೇವರು.. ಪದೇ ಪದೇ ಪೊಲೀಸ್​​ ಠಾಣೆ ಮೆಟ್ಟಿಲ್ಲೇರುತ್ತಿದ್ದವನು ಇವತ್ತೂ ಕೂಡ ಪೊಲೀಸರ ಅತಿಥಿಯಾಗಿದ್ದಾನೆ.. ಆದ್ರೆ ಈ ಬಾರಿ ಸರಿಯಾಗಿ ಲಾಕ್​ ಆಗಿದ್ದಾನೆ.. ಅಮಾಯಕ ಯುವಕನ್ನೊಬ್ಬನನ್ನ ಕೊಲೆ ಮಾಡಿದ ಆರೋಪದಡಿ ಇವತ್ತು ದರ್ಶನ್​ ಆ್ಯಂಡ್​​ ಗ್ಯಾಂಗ್​​​ ಅಂದರ್​​ ಆಗಿದ್ದಾರೆ... ಹಾಗಾದ್ರೆ ದರ್ಶನ್​ ಅರೆಸ್ಟ್​​ ಆಗಿದ್ದೇಕೆ..? ಯಾರನ್ನ ಈತ ಕೊಲೆ ಮಾಡಿದ್ದು..? ಇಡೀ ರಾಜ್ಯವನ್ನೇ ಶಾಕ್​ ಆಗುವಂತೆ ಮಾಡಿದ್ದ ಸೆಲಬ್ರಿಟಿಯೊಬ್ಬನ ಬಂಧನದ ಕಥೆಯಾಗಿದೆ. 

ಕಾನೂನು ಎಲ್ಲರಿಗೂ ಒಂದೇ ಅಂತ ಸುಮ್ಮನೇ ಹೇಳ್ತಾರಾ.. ಅದು ಡಿ ಬಾಸ್​​ ಆಗಲಿ.. ಚಾಲೆಂಜಿಂಗ್​ ಸ್ಟಾರ್​​ ಆಗಿರಲಿ.. ಇವತ್ತು ಮಾಡಿದ ತಪ್ಪಿಗೆ ಗಂಡ ಹೆಂಡತಿ ಇಬ್ಬರೂ ಪೊಲೀಸ್​​ ಠಾಣೆಯಲ್ಲಿ ಕೂತಿದ್ದಾರೆ.. ಆದ್ರೆ ಇವರು ಮಾಡಿದ ಆ ಕೊಲೆ ಇದ್ಯಲ್ಲ ನಿಜಕ್ಕೂ ಬ್ರೂಟಲ್​​... ಒಬ್ಬ ಅಮಾಯಕ ಸಿಕ್ಕಿದ ಅಂತ ಅವನಿಗೆ ಇನ್ನಿಲದಂತೆ ಹಿಂಸೆ ಕೊಟ್ಟು ಕೊಂದು ಬಿಟ್ಟಿದ್ದಾರೆ.. ಅಷ್ಟಕ್ಕೂ ಕೊಲೆಯಾದವನು ಯಾರು..? ಅವನನ್ನ ಇವರೆಲ್ಲಾ ಕೊಂದಿದ್ದೇಕೆ..?

ನಟ ದರ್ಶನ್ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದ ಕೊಲೆಯಾದ ರೇಣುಕಾಸ್ವಾಮಿ ಬೆಂಬಲಿಗರು

ಆತ ಮೆಡಿಕಲ್​ ಶಾಪ್​ನಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡ್ತಿದ್ದವನು.. ಹೆಂಡತಿ ಮೂರು ತಿಂಗಳ ಗರ್ಭಿಣಿ.. ಪ್ರತೀ ನಿತ್ಯೆ ಕೆಸಲಕ್ಕೆ ಹೋಗಿ ಬರ್ತಿದ್ದವನು ಆವತ್ತು ಮನೆಗೆ ವಾಪಸ್​ ಆಗೋದೇ ಇಲ್ಲ.. ಮನೆಯವರು ಮಿಸ್ಸಿಂಗ್​ ಕೇಸ್​​ ದಾಖಲಿಸುತ್ತಾರೆ.. ಆದ್ರೆ ಮಿಸ್ಸಿಂಗ್​ ಆಗಿ ಮಾರನೇ ದಿನವೇ ಆತ ಕೊಲೆಯಾಗಿರೋ ಸುದ್ದಿ ಬರುತ್ತೆ.. ಇನ್ನೂ ಅದೇ ಕೊಲೆ ಕೇಸ್​ನ ತನಿಖೆ ನಡೆಸಿದ ಪೊಲೀಸರು ಇವತ್ತು ದರ್ಶನ್​ ಮತ್ತು ಆತನ ಸಹಚರರನ್ನ ಬಂಧಿಸಿದ್ದಾರೆ.. ದರ್ಶನ್​ ಪತ್ನಿ ಪವಿತ್ರಾ ಗೌಡಳಿಗೆ ಅಶ್ಲೀಲವಾಗಿ ಮೆಸೆಜ್​ ಮಾಡಿದ ಅನ್ನೋ ಕಾರಣಕ್ಕೆ ಅವನನ್ನ ಕಿಡ್​ನ್ಯಾಪ್​ ಮಾಡಿ ಶೆಡ್​ವೊಂದರಲ್ಲಿ ಇನ್ನಿಲ್ಲದಂತೆ ಹಲ್ಲೆ ಮಾಡಿ ನಂತರ ಅವನು ಅವರ ಏಟು ತಾಳಲಾರದೇ ಪ್ರಾಣ ಬಿಟ್ಟಾಗ ಅವನ ಶವವನ್ನ ಮೋರಿಯ ಬಳಿ ಎಸೆದು ಬಂದಿದ್ದರು.

ನಟ ದರ್ಶನ್ ಆಗಲಿ ಯಾರೇ ಆಗಿರಲಿ, ಎಲ್ಲರಿಗೂ ಒಂದೇ ಕಾನೂನು; ಗೃಹ ಸಚಿವ ಡಾ.ಜಿ. ಪರಮೇಶ್ವರ

ಸದ್ಯ ಎಲ್ಲಾ 13 ಆರೋಪಿಗಳ ಬಂಧನವಾಗಿದೆ... 6 ದಿನ ಪೊಲೀಸರ ಕಸ್ಟಡಿಗೂ ನೀಡಲಾಗಿದೆ.. ಈ ಆರು ದಿನಗಳ ವಿಚಾರಣೆಯಲ್ಲಿ ಈ ಡಿ ಗ್ಯಾಂಗ್​ ಪೊಲೀಸರೆದುರು ಏನೇನು ಹೇಳ್ತಾರೋ ಕಾದು ನೋಡೋಣ ಅಂತ ಹೇಳ್ತಾ ಇವತ್ತಿನ ಎಪಿಸೋಡ್​ ಮುಗಿಸುತ್ತಿದ್ದೇನೆ.

Video Top Stories