Suvarna FIR: ಸ್ವಾಮೀಜಿ ವೇಷದಲ್ಲಿ ತಲೆಮರೆಸಿಕೊಂಡಿದ್ದ ಪಾಗಲ್ ಪ್ರೇಮಿ ಅರೆಸ್ಟ್!

16 ದಿನಗಳ ಹಿಂದೆ ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಬೆಂಗಳೂರಿನಲ್ಲಿ ಆ್ಯಸಿಡ್‌ ದಾಳಿ ನಡೆಸಿ, ತಮಿಳುನಾಡಿನ ಆಶ್ರಮವೊಂದರಲ್ಲಿ ಕಾವಿಧಾರಿ ವೇಷದಲ್ಲಿ ತಲೆಮರೆಸಿಕೊಂಡಿದ್ದ ಕಿಡಿಗೇಡಿಯನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 14): ಪ್ರೀತಿ ನಿರಾಕರಿಸಿದ ಯುವತಿಯ ಮೇಲೆ ಆ್ಯಸಿಡ್‌ ದಾಳಿ (Acid Attack) ಕಳೆದ 16 ದಿನಗಳಿಂದ ತಲೆಮರೆಸಿಕೊಂಡಿದ್ದ ಪಾಗಲ್ ಪ್ರೇಮಿ ನಾಗೇಶ್ ಬಾಬುನನ್ನು (Nagesh Babu) ತಮಿಳುನಾಡಿನಲ್ಲಿ (Tamil Nadu)ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲಿನ ಆಶ್ರಮವೊಂದರಲ್ಲಿ ಕಾವಿಧಾರಿ ಸ್ವಾಮೀಜಿಯ (Swamiji) ವೇಷದಲ್ಲಿ ನಾಗೇಶ್ ಬಾಬು ತಲೆಮರೆಸಿಕೊಂಡಿದ್ದ.

ಬೆನ್ನಿಗೆ ಬಿದ್ದ ಬೇತಾಳನಂತೆ, ಪ್ರೀತ್ಸೇ ಪ್ರೀತ್ಸೇ ಎಂದು ಕಾಡುತ್ತಿದ್ದ ಪಾಗಲ್ ಪ್ರೇಮಿ, ಕೊನೆಗೆ ತಾನು ಇಷ್ಟ ಪಟ್ಟವಳಿಗೆ ಆ್ಯಸಿಡ್‌ ಹಾಕಿದ್ದ. ತನ್ನ ಪ್ರೀತಿಯನ್ನು ನಿರಾಕರಿಸಿದ್ದಳು ಎನ್ನುವ ಒಂದೇ ಕಾರಣಕ್ಕಾಗಿ ಅಮಾಯಕ ಹೆಣ್ಣುಮಗಳ ಮೇಲೆ ಈ ಕೃತ್ಯ ಎಸಗಿದ್ದ.

ಈ 16 ದಿನಗಳಲ್ಲಿ ನಾಗೇಶ್ ಬಾಬು ಎಲ್ಲೆಲ್ಲಿಗೆ ಹೋಗಿದ್ದ, ಏನೆಲ್ಲಾ ಮಾಡಿದ್ದ, ಈತನನ್ನು ಹುಡುಕಲು ಪೊಲೀಸರು ಮಾಡಿದ ಶ್ರಮವೆಷ್ಟು ಎನ್ನುವುದರ ಕಂಪ್ಲೀಟ್ ಮಾಹಿತಿ. ಏನು ಕ್ಲೂ ಇಲ್ಲದೇ ತಮಿಳುನಾಡಿನ ತಿರುಣಾಮಲೈನ ರಮಣಶ್ರೀ (Ramanashri) ಆಶ್ರಮದಲ್ಲಿ ಅಡಗಿ ಕುಳಿತಿದ್ದವನನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ..ಆದ್ರೂ ತಲೆ ಹರಟೆ ಮಾಡಿ ಪರಾರಿಯಾಗಲ್ಲೂ ಹೋಗಿ ಪೊಲೀಸರ ಗುಂಡೇಟು ತಿಂದಿದ್ದಾನೆ.

Related Video