ಯಮರೂಪಿ ಬಿಎಂಟಿಸಿ, ಸಾವು ಬದುಕಿನ ನಡುವೆ ವಿದ್ಯಾರ್ಥಿನಿ ಹೋರಾಟ!

ಬೆಂಗಳೂರಿನ ಜ್ಞಾನಭಾರತಿ ಯುನಿವರ್ಸಿಟಿ ಬಳಿ ಬಸ್‌ ಹತ್ತುವಾಗ ಆಯ ತಪ್ಪಿ ಬಿದ್ದ ವಿದ್ಯಾರ್ಥಿನಿ ಮೇಲೆ  ಬಸ್‌ ಹರಿದಿದ್ದು,ಅಪಘಾತ ದಲ್ಲಿ ವಿದ್ಯಾರ್ಥಿನಿಗೆ ಗಂಭೀರ ಗಾಯವಾಗಿದೆ, 

Share this Video
  • FB
  • Linkdin
  • Whatsapp

ಬಸ್‌ ಹತ್ತುವಾಗ ವಿದ್ಯಾರ್ಥಿನಿ ಆಯ ತಪ್ಪಿ ಬಿದ್ದ ಪರಿಣಾಮ ವಿದ್ಯಾರ್ಥಿನಿ ಮೇಲೆ ಬಸ್‌ ಹರಿದ ಘಟನೆ ಬೆಂಗಳೂರಿನ ಜ್ಞಾನಭಾರತಿ ಯುನಿವರ್ಸಿಟಿಯಲ್ಲಿ ಸಂಭವಿಸಿದೆ. ವಿದ್ಯಾರ್ಥಿನಿ ಬಸ್ ಹತ್ತುತ್ತಿರುವಾಗ ಬಸ್ ಚಾಲಕ ಬಸ್ ಮೂವ್ ಮಾಡಿದ್ದಾನೆ ಎನ್ನಲಾಗಿದೆ. ಇನ್ನು ಮೊದಲ ವರ್ಷದ ಪಿ ಜಿ ವ್ಯಾಸಂಗ ಮಾಡುತ್ತಿದ್ದ ಕೋಲಾರ ಮೂಲದ ಶಿಲ್ಪ ಅಪಘಾತಕ್ಕೆ ಒಳಗಾಗಿದ್ದು ,ಗಂಭೀರ ಗಾಯವಾಗಿದೆ. ಈ ಘಟನೆ ಸಂಬಂಧ ರಸ್ತೆಯಲ್ಲಿ ಕುಳಿತು ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದು,ಯುನಿವರ್ಸಿಟಿ ಒಳಗೆ ಸಾರ್ವಜನಿಕ ವಾಹನಗಳ ಎಂಟ್ರಿ ವಿರೋಧಿಸಿ ಪ್ರತಿಭಟನೆ ನಡೆಸಿದರು. ಹಾಗೆ ಘಟನಾ ಸ್ಥಳಕ್ಕೆ ಸಾರಿಗೆ ಸಚಿವರು ಬರಬೇಕು ಎಂದು ಒತ್ತಾಯಿಸಿದರು.

ಮದುವೆಯಾಗೊ ಹುಡುಗಿಗಿತ್ತು ಅಕ್ರಮ ಸಂಬಂಧ: ವೈದ್ಯನ ಕೊಲೆ ಪ್ರಕರಣಕ್ಕೆ ರೋಚಕ ತಿರುವು

Related Video