ಮದುವೆಯಾಗೊ ಹುಡುಗಿಗಿತ್ತು ಅಕ್ರಮ ಸಂಬಂಧ: ವೈದ್ಯನ ಕೊಲೆ ಪ್ರಕರಣಕ್ಕೆ ರೋಚಕ ತಿರುವು
Bengaluru Crime News: ಬೆಂಗಳೂರಿನ ಬೇಗೂರಿನಲ್ಲಿ ನಡೆದ ವೈದ್ಯನ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಮಹತ್ವದ ಸತ್ಯ ಹೊರ ಬಿದ್ದಿದ್ದು ವೈದ್ಯ ವಿಕಾಸ್ ಮದುವೆಯಾಗಬೇಕಿದ್ದ ಹುಡುಗಿಗೆ ಅಕ್ರಮ ಸಂಬಂಧವಿತ್ತು. ಇದು ವಿಕಾಸ್‌ಗೆ ತಿಳಿದಿದ್ದೇ ಕೊಲೆಗೆ ಮುನ್ನುಡಿಯಾಯಿತು ಎಂಬ ಸತ್ಯ ಬೆಳಕಿಗೆ ಬಂದಿದೆ.
ಬೆಂಗಳೂರು: ಹೊಸೂರು ರಸ್ತೆಯ ಬೇಗೂರಿನ ನ್ಯೂ ಮೈಕೊ ಲೇಔಟ್‌ನಲ್ಲಿ ನಡೆದಿದ್ದ ವೈದ್ಯ ವಿಕಾಸ್ ಕೊಲೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಸೆಪ್ಟೆಂಬರ್ 14 ರಂದು ವಿಕಾಸ್ ಕೊಲೆಯಾಗಿದ್ದ. ವೈದ್ಯ ವಿಕಾಸ್ ಪ್ರೇಯಸಿ ಪ್ರತಿಭಾಗೆ ಇನ್ನೊಂದು ವ್ಯಕ್ತಿಯ ಜೊತೆ ಅನೈತಿಕ ಸಂಬಂಧ ಇರುವುದು ತನಿಖೆ ವೇಳೆ ಪೊಲೀಸರಿಗೆ ತಿಳಿದಿದೆ. ಪ್ರತಿಭಾ ಮತ್ತು ವಿಕಾಸ್ ಇಬ್ಬರ ಮದುವೆ ಕೂಡ ಫಿಕ್ಸ್ ಆಗಿತ್ತು. ಮೂರು ತಿಂಗಳಲ್ಲಿ ಅವರಿಬ್ಬರೂ ಹಸೆಮಣೆ ಏರಿ ದಾಂಪತ್ಯ ಜೀವನ ಆರಂಭಿಸಲು ಸಿದ್ಧರಾಗಿದ್ದರು. ಆದರೆ ದುರಂತವೆಂದರೆ ಪ್ರತಿಭಾ ಇನ್ನೊಂದು ಸಂಬಂಧವನ್ನೂ ಇಟ್ಟುಕೊಂಡಿದ್ದಳು. ಇತ್ತ ವಿಕಾಸ್‌ನನ್ನೂ ಪ್ರೀತಿಸುತ್ತಿದ್ದಳು ಅತ್ತ ಸುಶೀಲ್ ಎಂಬಾತನ ಜೊತೆಗೆ ದೈಹಿಕ ಸಂಬಂಧವನ್ನೂ ಇಟ್ಟುಕೊಂಡಿದ್ದಳು. ಇದನ್ನು ತಿಳಿದ ನಂತರ ಆಕೆಯ ನಗ್ನ ವಿಡಿಯೋಗಳನ್ನು ವಿಕಾಸ್ ಸೋರಿಕೆ ಮಾಡಿದ್ದ. ಇದೇ ಆತನ ಕೊಲೆಗೆ ಕಾರಣವಾಗಿದ್ದು ಎಂಬ ಅಂಶ ಈಗ ಪತ್ತೆಯಾಗಿದ್ದು, ಆರೋಪಿಗಳಾದ ಪ್ರತಿಭಾ, ಸುಶೀಲ್, ಗೌತಮ್ ಮತ್ತು ಸೂರ್ಯ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ವಿಕಾಸ್ ಮತ್ತು ಆರೋಪಿಗಳಾದ ಪ್ರತಿಭಾ, ಸುಶೀಲ್, ಗೌತಮ್ ಮತ್ತು ಸೂರ್ಯ ಎಲ್ಲರೂ ಚೆನ್ನೈನ ಮೂಲದವರು. ವಿಕಾಸ್ ವೈದ್ಯನಾಗಿದ್ದರೆ, ಆರೋಪಿಗಳೆಲ್ಲರೂ ಆರ್ಕಿಟೆಕ್ಟ್‌ಗಳು. ಎಲ್ಲರೂ ಬೆಂಗಳೂರಿನಲ್ಲೇ ಕೆಲಸ ಮಾಡುತ್ತಿದ್ದರು.
ಏನಿದು ಪ್ರಕರಣ:
ಅವನು ಡಾಕ್ಟರ್... ದೂರದ ಉಕ್ರೇನ್‌ನಲ್ಲಿ ಎಂ.ಬಿ.ಬಿಎಸ್ ಮಾಡಿ ತನ್ನ ಹುಟ್ಟೂರು ಚೆನ್ನೈನಲ್ಲಿ ಡಾಕ್ಟರ್ ಆಗಿದ್ದ. ಇದೇ ಡಾಕ್ಟರ್‌ಗೆ ಬೆಂಗಳೂರಿನ ಸುಂದರಿಯೊಬ್ಬಳ ಪರಿಚಯವಾಗುತ್ತೆ. ಪರಿಚಯ ಸ್ನೇಹವಾಗಿ ನಂತರ ಅದು ಪ್ರೀತಿಗೆ ತಿರುಗುತ್ತೆ. ಇಬ್ಬರೂ ತಮ್ಮ ಪೋಷಕರನ್ನ ಒಪ್ಪಿಸಿ ಮದುವೆಗೂ ಸಿದ್ಧರಾಗ್ತಾರೆ. ಇನ್ನೇನು ಮದುವೆಯಾಗಲು ಮೂರು ತಿಂಗಳಷ್ಟೇ ಬಾಕಿ ಇದ್ದಿದ್ದು. ಅಷ್ಟರಲ್ಲೇ ಮಧುಮಗ ಸಾವನ್ನಪ್ಪಿಬಿಡ್ತಾನೆ. ಹಸೆಮಣೆ ಏರಬೇಕಿದ್ದವನು, ಸ್ಮಶಾನ ಸೇರಿಕೊಳ್ತಾನೆ. ಆದ್ರೆ ಅವನ ಸಾವು ಸಹಜವಾಗಿರೋದಿಲ್ಲ. ಅವನನ್ನ ಕೊಂದು ಮುಗಿಸಲಾಗಿರುತ್ತೆ. ಹಾಗಾದ್ರೆ ಆ ವೈದ್ಯನನ್ನ ಕೊಂದವರು ಯಾರು ಎಂಬ ಪ್ರಶ್ನೆ ಬೆನ್ನತ್ತಿ ಪೊಲೀಸ್ ತನಿಖೆ ಆರಂಭವಾಗುತ್ತದೆ.
ಇದನ್ನೂ ಓದಿ: Belagavi Crime: ಪ್ರಿಯಕರನ ಜತೆ ಸೇರಿ ಪತಿಯನ್ನೇ ಕೊಂದ ಕಿರಾತಕಿ ಪತ್ನಿ..!
ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ವಿಕಾಸ್ ಮತ್ತು ಪ್ರತಿಭಾ ಡೀಪ್ ಲವ್ನಲ್ಲಿ ಬಿದ್ದುಬಿಡ್ತಾರೆ. ಇಬ್ಬರ ನಡುವೆ ದೇಹ ಸಂಬಂಧ ಕೂಡ ಬೆಳೆದಿರುತ್ತೆ. ಇನ್ನೂ ಇವರಿಬ್ಬರೂ ರಿಲೇಷನ್ಶಿಪ್ನಲ್ಲಿ ಸೀರಿಯಸ್ ಆಗಿದ್ರಿಂದ ಮದುವೆ ಆಗಲು ನಿರ್ಧರಿಸಿ ತಮ್ಮ ತಮ್ಮ ಮನೆಯವರನ್ನ ಒಪ್ಪಿಸಿರುತ್ತಾರೆ. ಮದುವೆಗೆ ಇನ್ನೂ ಕೆಲವೇ ತಿಂಗಳುಗಳು ಬಾಕಿ ಇರುತ್ವೆ ಆದ್ರೆ ಇದೇ ಟೈಂನಲ್ಲಿ ವಿಕಾಸ್ ಒಂದು ಎಡವಟ್ಟು ಮಾಡಿಬಿಡ್ತಾನೆ. ಆತ ಪ್ರತಿಭಾಳ ಖಾಸಗಿ ವಿಡಿಯೋಗಳನ್ನು ಲೀಕ್ ಮಾಡುತ್ತಾನೆ. ಅಷ್ಟಕ್ಕೂ ಆತ ಖಾಸಗಿ ವಿಡಿಯೋಗಳನ್ನು ಹಂಚಿಕೊಂಡಿದ್ದು ಯಾಕೆ ಎಂಬ ಪ್ರಶ್ನೆಗೆ ಆರಂಭದಲ್ಲಿ ಉತ್ತರ ಸಿಗುವುದಿಲ್ಲ. ಆದರೆ ತನಿಖೆಯ ವೇಳೆ, ಪ್ರತಿಭಾಗಿದ್ದ ಅನೈತಿಕ ಸಂಬಂಧದ ಕುರಿತು ಮಾಹಿತಿ ಸಿಗುತ್ತದೆ. ಪ್ರಿಯಕರನೂ ಬೇಕು ಇತ್ತ ಮತ್ತೊಬ್ಬನ ಸಂಗವೂ ಬೇಕು ಎಂದು ಇಬ್ಬರ ಜೊತೆ ಆಟವಾಡುತ್ತಿದ್ದ ಪ್ರತಿಭಾ ಮೇಲೆ ವಿಕಾಸ್ ಕೋಪಗೊಳ್ಳುತ್ತಾನೆ. ಅದೇ ಆತನ ಕೊಲೆಗೆ ಮುನ್ನುಡಿಯಾಗುತ್ತದೆ.
ಇದನ್ನೂ ಓದಿ: ಕೋಟಿ ಮಾತನಾಡಿದರೂ, ಕೋಟಿ ಮುತ್ತ ನೀಡಿದರೂ.. ಪ್ರೀತಿಸಿದವನನ್ನೇ ಕೊಂದಳು!
ಯಾವಾಗ ಪ್ರತಿಭಾ ತನ್ನ ಸ್ನೇಹಿತರ ಬಳಿ ಹೋಗಿ ವಿಕಾಸ್ ಹೀಗೆ ಮಾಡಿಬಿಟ್ಟ ಅಂತ ಹೇಳ್ತಾಳೋ ಆಕೆಯ ಸ್ನೇಹಿತರು ವಿಕಾಸನಿಗೆ ಬುದ್ಧಿ ಕಲಿಸುವ ನಿರ್ಧಾರ ಮಾಡ್ತಾರೆ. ಆತ ಮಾಡಿರುವ ತಪ್ಪಿಗೆ ಪಾಠ ಕಲಿಸಬೇಕು ಅಂತ ಹೇಳಿ ಮಾರನೇ ದಿನ ವಿಕಾಸ್ನನ್ನ ಪ್ರತಿಭಾ ಮೂಲಕ ತಮ್ಮ ಮನೆಗೆ ಕರೆಸಿಕೊಳ್ತಾರೆ. ಚೆನ್ನಾಗಿ ಆತನಿಗೆ ಹಲ್ಲೆ ಮಾಡ್ತಾರೆ. ಆದ್ರೆ ಇವರು ಕೊಟ್ಟ ಏಟಿಗೆ ವಿಕಾಸನ ಪ್ರಾಣ ಪಕ್ಷಿಯೇ ಹಾರಿಹೋಗಿಬಿಡುತ್ತೆ. ಇದಾದ ನಂತರ ಪ್ರಕರಣದಿಂದ ಬಚಾವಾಗಲು ಯತ್ನಿಸುತ್ತಾರಾದರೂ ಪೊಲೀಸರ ಮುಂದೆ ಇವರ ಆಟ ನಡೆಯುವುದಿಲ್ಲ. ಮೊದಲು ವಿಕಾಸ್ ನಗ್ನ ವಿಡಿಯೋ ಸೋರಿಕೆ ಮಾಡಿದ್ದರ ಬಗ್ಗೆ ಪೊಲೀಸರಿಗೆ ತಿಳಿಸಿ ಸ್ವಲ್ಪ ಸಿಂಪತಿ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಆಕೆಗೆ ಇನ್ನೊಂದು ಸಂಬಂಧ ಇತ್ತು ಎಂಬುದು ತಿಳಿದ ನಂತರ ಆರೋಪಿಗಳ ಆಟ ನಿಲ್ಲುತ್ತದೆ.