ವಿಜಯಪುರ: 50 ಲಕ್ಷ ಸಾಲ ವಿಚಾರಕ್ಕೆ 4 ಮಕ್ಕಳ ಪ್ರಾಣ ಹೋಯ್ತಾ?

ಲಿಂಗರಾಜ್‌ ಅವರು ಸುಮಾರು 50 ಲಕ್ಷವರೆಗೂ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲು ಜಮೀನು ಮಾರಾಟ ಮಾಡಲು ನಿರ್ಧರಿಸಿದ್ದರು.  ಕುಟುಂಬದವರ ಬಳಿ ಲಿಂಗರಾಜ್‌ ಹಾಗೂ ಪತ್ನಿ ಜಮೀನಿನಲ್ಲಿ ಪಾಲು ಕೇಳಿದ್ದರು. ಹೀಗಾಗಿ ಕುಟುಂಬದಲ್ಲಿ ಕಲಹ ಶುರುವಾಗಿತ್ತು. 

First Published Jan 14, 2025, 11:53 AM IST | Last Updated Jan 14, 2025, 11:59 AM IST

ವಿಜಯಪುರ(ಜ.14):  ಜಿಲ್ಲೆಯಲ್ಲಿ ನಡೆದ ತಾಯಿ, ಮಕ್ಕಳ ಆತ್ಮಹತ್ಯೆ ಕೇಸ್‌ಗೆ ಇದೀಗ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಹೌದು, 50 ಲಕ್ಷ ಸಾಲ ವಿಚಾರಕ್ಕೆ 4 ಮಕ್ಕಳ ಪ್ರಾಣ ಹೋಯ್ತಾ? ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿವೆ. ಮೃತ ನಾಲ್ವರು ಮಕ್ಕಳ ತಂದೆ ಲಿಂಗರಾಜ್‌ ತೆಲಗಿ ಗ್ರಾಮ ಪಂಚಾಯತ್‌ ಸದಸ್ಯರಾಗಿದ್ದಾರೆ. ಲಿಂಗರಾಜ್‌ ಪ್ರತಿ ವರ್ಷ ಮೊಹರಂ ಹಬ್ಬದಲ್ಲಿ ಅಲಾಯಿ ಹೊರುತ್ತಿದ್ದರು. ದೇವರಿಗಾಗಿಯೇ ಮಕ್ಕಳಿಗೆ ಹಸೇನ್‌ ಮತ್ತು ಹುಸೇನ್‌ ಅಂತ ಹೆಸರಿಟ್ಟಿದ್ದರು.  ಲಿಂಗರಾಜ್‌ ಅವರು ಸುಮಾರು 50 ಲಕ್ಷವರೆಗೂ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲು ಜಮೀನು ಮಾರಾಟ ಮಾಡಲು ನಿರ್ಧರಿಸಿದ್ದರು.  ಕುಟುಂಬದವರ ಬಳಿ ಲಿಂಗರಾಜ್‌ ಹಾಗೂ ಪತ್ನಿ ಜಮೀನಿನಲ್ಲಿ ಪಾಲು ಕೇಳಿದ್ದರು. ಹೀಗಾಗಿ ಕುಟುಂಬದಲ್ಲಿ ಕಲಹ ಶುರುವಾಗಿತ್ತು. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 

ಕಾಂಗ್ರೆಸ್​ ಸರ್ಕಾರಕ್ಕೂ ಕಮಿಷನ್ ಕಳಂಕ: ಸರ್ಕಾರದ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರ ಸಂಘ