Asianet Suvarna News Asianet Suvarna News

ಕೂತಲ್ಲೇ ಕೋಟಿ ಕೋಟಿ ಬಾಚಿ, ಜಗತ್ತಿಗೆ ಮಂಕು ಬೂದಿ ಎರಚುತ್ತಿದ್ದ ಹ್ಯಾಕರ್ ಶ್ರೀಕಿ ಅಂದರ್ ಆಗಿದ್ಹೇಗೆ?

Nov 21, 2020, 5:08 PM IST

ಬೆಂಗಳೂರು (ನ. 21):  ದೇಶ ಹಾಗೂ ವಿದೇಶದ ಸರ್ಕಾರಿ ಮತ್ತು ಖಾಸಗಿ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡುತ್ತಿದ್ದ ಬೆಂಗಳೂರಿನ ಹ್ಯಾಕರ್ ಶ್ರೀಕೃಷ್ಣ ಈಗ ಅಂದರ್ ಆಗಿದ್ದಾನೆ.  

ಜಯನಗರದ ಶ್ರೀಕೃಷ್ಣ, ನೆದರ್‌ಲ್ಯಾಂಡ್‌ನಲ್ಲಿ ಬಿಎಸ್ಸಿ ಕಂಪ್ಯೂಟರ್‌ ಸೈನ್ಸ್‌ ಪದವಿ ಮುಗಿಸಿ ಬೆಂಗಳೂರಿಗೆ ಮರಳಿದ್ದ. ಕಂಪ್ಯೂಟರ್‌, ಇಂಟರ್‌ನೆಟ್‌ ಬಳಕೆ ಮತ್ತು ಪ್ರೋಗ್ರಾಮಿಂಗ್‌ನಲ್ಲಿ ಚಾಣಾಕ್ಷನಾಗಿದ್ದ. ಮೊದಲ ಬಾರಿಗೆ ರನ್‌ಸ್ಕೆ$ೖಪ್‌ ಎಂಬ ಆನ್‌ಲೈನ್‌ ಗೇಮ್‌ನ್ನು ಹ್ಯಾಕ್‌ ಮಾಡಿದ್ದ ಆತ, ನಂತರ ಇಂಡಿಯನ್‌ ಪೋಕರ್‌ ವೆಬ್‌ಸೈಟ್‌, ಆನ್‌ಲೈನ್‌ ಬಿಟ್‌ಕಾಯಿನ್‌ ಮತ್ತು ಇತರೆ ವೆಬ್‌ಸೈಟ್‌ಗಳಿಗೆ ಕನ್ನ ಹಾಕಿದ್ದ.

2019 ರಲ್ಲಿ ರಾಜ್ಯ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್‌ ವೆಬ್‌ಸೈಟನ್ನು ಹ್ಯಾಕ್‌ ಮಾಡಿದ್ದಾನೆ. ವಿವಿಧ ಆನ್‌ಲೈನ್‌ ಗ್ಯಾಂಬ್ಲಿಗ್‌ ವೆಬ್‌ಸೈಟ್‌ಗಳ ಹ್ಯಾಕ್‌ ಮಾಡಿಸಿ ಆಟಗಾರರ ಕಾರ್ಡ್‌ ನೋಡಿಕೊಂಡು ಮಾಹಿತಿ ಸೋರಿಕೆ ಮಾಡಿ ಹಣ ಸಂಪಾದನೆ ಮಾಡುತ್ತಿದ್ದ. ಇಷ್ಟು ಚಾಣಾಕ್ಷ್ಯನಿಂದ ಶ್ರೀಕಿ ಸಿಕ್ಕಿ ಬಿದ್ದಿದ್ಹೇಗೆ? ನೋಡೊಣ ಬನ್ನಿ...!