Asianet Suvarna News Asianet Suvarna News

ಅನಿಲ್ ಕುಂಬ್ಳೆ ಬಗೆಗಿನ ಕುತೂಹಲಕಾರಿ ಸಂಗತಿಗಳಿವು

ಇಂದು ಅನಿಲ್ ಕುಂಬ್ಳೆ ಹುಟ್ಟುಹಬ್ಬ. ಕುಂಬ್ಳೆ ಬಗೆಗಿನ ಗೊತ್ತಿಲ್ಲದ ಸಂಗತಿಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ

ಬೆಂಗಳೂರು[ಅ.17]: ಇಂದು ಅನಿಲ್ ಕುಂಬ್ಳೆ ಹುಟ್ಟುಹಬ್ಬ. ಕುಂಬ್ಳೆ ಬಗೆಗಿನ ಗೊತ್ತಿಲ್ಲದ ಸಂಗತಿಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಬೆಂಗಳೂರಿನ  RVCE ಕಾಲೇಜಿನಲ್ಲಿ ಕುಂಬ್ಳೆ ತಮ್ಮ ಮೆಕಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದರು.

ಹೆಮ್ಮೆಯ ಕನ್ನಡಿಗ ಅನಿಲ್ ಕುಂಬ್ಳೆಗಿಂದು 49ನೇ ಹುಟ್ಟುಹಬ್ಬದ ಸಂಭ್ರಮ

ಅನಿಲ್ ಕುಂಬ್ಳೆಯನ್ನು ಸಾಮಾನ್ಯವಾಗಿ ಜಂಬೋ ಎನ್ನುವ ನಿಕ್ ನೇಮ್’ನಿಂದ ಕರೆಯುತ್ತಾರೆ. ಜಂಬೋ ಎನ್ನಲು ಕಾರಣ, ಕುಂಬ್ಳೆ ಬೌಲಿಂಗ್’ನಲ್ಲಿನ ವೇರಿಯೇಶನ್ಸ್. ಯಾವುದೇ ಪಿಚ್’ನಲ್ಲಾದರೂ ಬೌನ್ಸ್ ಹಾಕುವ ಕ್ಷಮತೆ ಕುಂಬ್ಳೆಗಿತ್ತು. ಹೀಗಾಗಿ ಸಹ ಆಟಗಾರರು ಜಂಬೋ ಎನ್ನುತ್ತಿದ್ದರು. ಇನ್ನೊಂದು ಸಿದ್ದಾಂತವೆಂದರೆ, ಕುಂಬ್ಳೆ ಅಗಲವಾದ ಪಾದ ಹೊಂದಿದ್ದರಿಂದ ಸಹಪಾಠಿಗಳು ಕುಂಬ್ಳೆ ಅವರನ್ನು ಜಂಬೋ ಎನ್ನುತ್ತಿದ್ದರು.

ಕುಂಬ್ಳೆ ಅತಿ ಹೆಚ್ಚು ಕಾಟ್ ಅಂಡ್ ಬೌಲ್ಡ್  ವಿಕೆಟ್ ಪಡೆದಿದ್ದಾರೆ. ಇದರೊಂದಿಗೆ ಸ್ಪಿನ್ ದಿಗ್ಗಜ ಶ್ರೀಲಂಕಾದ ಮುತ್ತಯ್ಯ ಮುರುಳೀಧರನ್ ಅವರನ್ನೂ ಹಿಂದಿಕ್ಕಿದ್ದಾರೆ. 

ಅನಿಲ್ ಕುಂಬ್ಳೆ ವೃತ್ತಿ ಜೀವನದ ಆರಂಭದಲ್ಲಿ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದರು. ಆ ಬಳಿಕ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್ ಆಗಿ ಬೆಳೆದು ನಿಂತರು. ಕುಂಬ್ಳೆ ಟೆಸ್ಟ್ ಇನಿಂಗ್ಸ್’ವೊಂದರಲ್ಲಿ 30ಕ್ಕೂ ಹೆಚ್ಚು ಬಾರಿ 5+ ವಿಕೆಟ್ ಪಡೆದ ನಾಲ್ವರು ಬೌಲರ್’ಗಳಲ್ಲಿ ಒಬ್ಬರು ಎನಿಸಿದ್ದಾರೆ.

ಅನಿಲ್ ಕುಂಬ್ಳೆ ಸೀಮಿತ ಓವರ್’ಗಳ ಕ್ರಿಕೆಟ್’ನಲ್ಲಿ ನಿರೀಕ್ಷಿತ ಯಶಸ್ಸು ದಕ್ಕಲಿಲ್ಲ, ಆದಾಗಿಯೂ ಅವರ ಒಂದು ದಾಖಲೆ ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ಉಳಿಯಲಿದೆ. ಜಿಂಬಾಬ್ವೆ ವಿರುದ್ಧ ವಿಕೆಟ್ ಪಡೆಯುವುದರೊಂದಿಗೆ 1998ರಲ್ಲಿ ಏಕದಿನ ಕ್ರಿಕೆಟ್’ನಲ್ಲಿ 200 ವಿಕೆಟ್ ಪಡೆದ ಮೊದಲ ಸ್ಪಿನ್ನರ್ ಎನ್ನುವ ದಾಖಲೆ ನಿರ್ಮಿಸಿದ್ದರು.