Asianet Suvarna News Asianet Suvarna News

ಬೆಳಗಾವಿ ಗೂಡಂಗಡಿಯಲ್ಲಿ ಟೀ ಕುಡಿದ ಸಚಿನ್ ತೆಂಡುಲ್ಕರ್, ಅಭಿಮಾನಿಗಳ ಜೊತೆ ಸೆಲ್ಫಿ!

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಬೆಳಗಾವಿಯ ರಸ್ತೆ ಬದಿಯ ಗೂಡಂಗಡಿಯಲ್ಲಿ ಚಹಾ ಕುಡಿದು ಅಭಿಮಾನಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ

Nov 1, 2022, 9:16 PM IST

ಬೆಳಗಾವಿ(ನ.01): ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ದಿಢೀರ್ ಬೆಳಗಾವಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಬೆಳಗಾವಿ  ಹೊರ ವಲಯದ ಮಚ್ಚೆ ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕು(ಎ) ರಸ್ತೆ ಪಕ್ಕದಲ್ಲಿನ ಗೂಡಂಗಡಿಯಲ್ಲಿ ಚಹಾ ಕುಡಿದು ಸ್ಥಳೀಯರ ಜೊತೆ ಮಾತುಕತೆ ನಡೆಸಿದ್ದಾರೆ. ವೈಜು ನಿತೂರ್ಕರ್ ಎಂಬುವವರ ಫೌಜಿ ಟೀ ಸ್ಟಾಲ್ ನಲ್ಲಿ ಚಹಾ ಸವಿದ ಸಚಿನ್ ತೆಂಡೂಲ್ಕರ್, ಟೀ ಮಾಲೀಕನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಮುಂಬೈನಿಂದ ಗೋವಾಕ್ಕೆ ಕುಟುಂಬ ಸಮೇತ ತೆರಳುತ್ತಿದ್ದ ವೇಳೆ ಬೆಳಗಾವಿ ಮೂಲಕ ಹಾದು ಹೋಗಿದ್ದಾರೆ. ಈ ವೇಳೆ ಬೆಳಗಾವಿಯಲ್ಲಿ ಇಳಿದು ಎಲ್ಲರಿಗೂ ಅಚ್ಚರಿ ನೀಡಿದ್ದಾರೆ.