
ಟಾಪ್ -2 ಸ್ಥಾನಕ್ಕಾಗಿಂದು ಮುಂಬೈ vs ಪಂಜಾಬ್ ಬಿಗ್ ಫೈಟ್
18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಂದು ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿದೆ. ಈ ಪಂದ್ಯದ ಇಂಟ್ರೆಸ್ಟಿಂಗ್ ಒಳನೋಟ ಇಲ್ಲಿದೆ ನೋಡಿ
18ನೇ ಆವೃತ್ತಿ ಐಪಿಎಲ್‌ನಲ್ಲಿ ಪ್ಲೇ-ಆಫ್ ಸ್ಥಾನದ ಪೈಪೋಟಿ ಕೊನೆಗೊಂಡಿದ್ದರೂ, ಅಗ್ರ-2 ಸ್ಥಾನಕ್ಕಾಗಿ 4 ತಂಡಗಳ ರೋಚಕ ಸ್ಪರ್ಧೆ ಮುಂದುವರಿದಿದೆ. ಇದರ ಭಾಗವಾಗಿ ಸೋಮವಾರ ಅತಿ ಮಹತ್ವದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ಪರಸ್ಪರ ಸೆಣಸಾಡಲಿವೆ. ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಆಡಿರುವ 13 ಪಂದ್ಯಗಳಲ್ಲಿ 17 ಅಂಕ ಹೊಂದಿದ್ದು, ಪಟ್ಟಿಯಲ್ಲಿ 2ನೇ ಸ್ಥಾನದ ಲ್ಲಿದೆ. ತಂಡ ಈ ಪಂದ್ಯದಲ್ಲಿ ಗೆದ್ದರೆ ಅಗ್ರಸ್ಥಾನಕೇರಲಿದ್ದು, ಲೀಗ್ ಹಂತದ ಕೊನೆಯಲ್ಲಿ ಅಗ್ರ -2ರಲ್ಲೇ ಉಳಿದುಕೊಳ್ಳಲಿದೆ. ಈ ಮೂಲಕ ಕಳೆದ 11 ವರ್ಷಗಳಲ್ಲೇ ಮೊದಲ ಬಾರಿ ಅಗ್ರ-2 ಸ್ಥಾನಿಯಾಗುವ ಅವಕಾಶ ಸಿಗಲಿದೆ.
ಮತ್ತೊಂದೆಡೆ 5 ಬಾರಿ ಚಾಂಪಿಯನ್ ಮುಂಬೈ ತಂಡ 13 ಪಂದ್ಯಗಳನ್ನಾಡಿದ್ದು, 16 ಅಂಕ ಸಂಪಾದಿಸಿದೆ. ತಂಡಕ್ಕೂ ಅಗ್ರ-2ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಅವಕಾಶವಿದೆ. ಈ ಪಂದ್ಯದಲ್ಲಿ ಗೆದ್ದರೆ ತಂಡದ ಅಂಕ 18 ಆಗಲಿದ್ದು, ನೆಟ್ ರನ್ ರೇಟ್ ಉತ್ತಮ ವಾಗಿರುವುದರಿಂದ ಗುಜರಾತ್ (18 ಅಂಕ)ನ ಹಿಂದಿಕ್ಕಿ ಅಗ್ರ -2ರಲ್ಲಿ ಸ್ಥಾನ ಪಡೆಯಬಹುದು. ಸೋತರೆ ತಂಡ 4ನೇ ಸ್ಥಾನದಲ್ಲೇ ಉಳಿದುಕೊಳ್ಳಲಿದ್ದು, ಎಲಿಮಿನೇಟರ್‌ನಲ್ಲಿ ಆಡಬೇಕಾಗುತ್ತದೆ.