ಕೊರೋನಾ ಫೈಟ್: ಪ್ರಧಾನಿ ಕೇರ್ಸ್‌ಗೆ ಕೈ ತುಂಬಾ ದೇಣಿಗೆ ನೀಡಿದ ಕ್ರಿಕೆಟರ್ಸ್

ಇಡೀ ಜಗತ್ತಿನಲ್ಲೇ ಮರಣ ಬೃದಂಗ ಬಾರಿಸಿರುವ ಕೊರೋನಾಗೆ ತಿರುಗೇಟು ನೀಡಲು ಭಾರತ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಈ ನಡುವೆ ಕೊರೋನಾ ವಿರುದ್ಧ ಹೋರಾಟ ನಡೆಸಲು ನಿಮ್ಮ ಕೈಲಾದ ಸಹಾಯ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿದ್ದರು.

First Published Mar 30, 2020, 3:15 PM IST | Last Updated Mar 30, 2020, 3:15 PM IST

ನವದೆಹಲಿ(ಮಾ.30): ಕೊರೋನಾ ವೈರಸ್ ಭೀತಿಗೆ ಭಾರತ ಹೈರಾಣಾಗಿದೆ. ಕೋವಿಡ್ 19 ಸೋಂಕು ಹರಡದಂತೆ ತಡೆಯಲು ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಕಾಲ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ.

COVID-19 ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ನೀಡಿದ ಕರ್ನಾಟಕ ಕ್ರಿಕೆಟ್ ಸಂಸ್ಥೆ!

ಇಡೀ ಜಗತ್ತಿನಲ್ಲೇ ಮರಣ ಬೃದಂಗ ಬಾರಿಸಿರುವ ಕೊರೋನಾಗೆ ತಿರುಗೇಟು ನೀಡಲು ಭಾರತ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಈ ನಡುವೆ ಕೊರೋನಾ ವಿರುದ್ಧ ಹೋರಾಟ ನಡೆಸಲು ನಿಮ್ಮ ಕೈಲಾದ ಸಹಾಯ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿದ್ದರು. ಸುರೇಶ್ ರೈನಾ, ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವು ಮಂದಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಲಕ್ಷಗಟ್ಟಲೆ ಹಣ ನೀಡಿ ಹಲವರಿಗೆ ಸ್ಫೂರ್ತಿಯಾದರು.

ಕೊರೋನಾ ಸಂಕಷ್ಟ: ದೇಶಕ್ಕೆ ಬರೋಬ್ಬರಿ 51 ಕೋಟಿ ರುಪಾಯಿ ದೇಣಿಗೆ ನೀಡಿದ ಬಿಸಿಸಿಐ..!

ಇದರ ಬೆನ್ನಲ್ಲೇ ಕ್ರೀಡಾಲೋಕ ಮೋದಿ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಬಿಸಿಸಿಐ ಬರೋಬ್ಬರಿ 51 ಕೋಟಿ ರುಪಾಯಿ ನೀಡಿದೆ. ಇನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಒಂದು ಕೋಟಿ ರುಪಾಯಿ ನೀಡಿದೆ. ಇನ್ನು ಹಲವು ಕ್ರಿಕೆಟಿಗರು ಕೈ ತುಂಬಾ ದೇಣಿಗೆ ನೀಡಿ ತಮ್ಮ ಬದ್ಧತೆ ಮೆರೆದಿದ್ದಾರೆ. ಯಾರೆಲ್ಲ ಎಷ್ಟು ಹಣ ನೀಡಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Read More...

Video Top Stories