Asianet Suvarna News Asianet Suvarna News

IPL 2020 ಟೂರ್ನಿ ರದ್ದಾದ್ರೆ ಕೆಲ ಕ್ರಿಕೆಟಿಗರ ಕೆರಿಯರ್ ಕ್ಲೋಸ್..!

ಭಾರತೀಯರ ಚುಟುಕು ಕ್ರಿಕೆಟ್ ಹಬ್ಬ ಐಪಿಎಲ್ ಟೂರ್ನಿ ಹಲವು ಕ್ರಿಕೆಟಿಗರ ಪಾಲಿಗೆ ಮಹತ್ವದ್ದಾಗಿದೆ. ಟಿ20 ಟೂರ್ನಿಗೂ ಮುನ್ನ ನಡೆಯುತ್ತಿರುವ ಮಿಲಿಯನ್ ಡಾಲರ್ ಟೂರ್ನಿ ಹಲವು ಕ್ರಿಕೆಟಿಗರ ವೃತ್ತಿ ಬದುಕನ್ನು ನಿರ್ಧರಿಸುವ ಸಾಧ್ಯತೆಯಿತ್ತು. ಭಾರತೀಯ ಕ್ರಿಕೆಟಿಗರು ಮಾತ್ರವಲ್ಲ, ವಿದೇಶಿ ಕ್ರಿಕೆಟಿಗರು ಐಪಿಎಲ್ ಟೂರ್ನಿಯಲ್ಲಿ ತಮ್ಮ ಅದೃಷ್ಠ ಪರೀಕ್ಷೆ ನಡೆಸುವ ಲೆಕ್ಕಾಚಾರದಲ್ಲಿದರು. ಆದರೆ ಕೊರೋನಾ ಎನ್ನುವ ಹೆಮ್ಮಾರಿ ಕೆಲ ಕ್ರಿಕೆಟಿರ ವೃತ್ತಿ ಬದುಕಿಗೆ ಪೂರ್ಣ ವಿರಾಮವಿಡುವ ಸಾಧ್ಯತೆಯಿದೆ.

First Published Mar 30, 2020, 6:30 PM IST | Last Updated Mar 30, 2020, 6:30 PM IST

ಬೆಂಗಳೂರು(ಮಾ.30): 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕೊರೋನಾ ಭೀತಿಯಿಂದಾಗಿ ಟೂರ್ನಿ ಏಪ್ರಿಲ್ 15ಕ್ಕೆ ಮುಂದೂಡಲ್ಪಟ್ಟಿದೆ. ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸಿ ರಾಷ್ಟ್ರೀಯ ತಂಡ ಕೂಡಿಕೊಳ್ಳುವ ಲೆಕ್ಕಾಚಾರ ಹಾಕಿಕೊಂಡಿದ್ದರು ಕೆಲವು ಕ್ರಿಕೆಟಿಗರು.

ಜೀವನ ಸಹಜ ಸ್ಥಿತಿಗೆ ಬರಲಿ, ಆಮೇಲೆ ಐಪಿಎಲ್‌ ಎಂದ ಹಿಟ್‌ಮ್ಯಾನ್

ಭಾರತೀಯರ ಚುಟುಕು ಕ್ರಿಕೆಟ್ ಹಬ್ಬ ಐಪಿಎಲ್ ಟೂರ್ನಿ ಹಲವು ಕ್ರಿಕೆಟಿಗರ ಪಾಲಿಗೆ ಮಹತ್ವದ್ದಾಗಿದೆ. ಟಿ20 ಟೂರ್ನಿಗೂ ಮುನ್ನ ನಡೆಯುತ್ತಿರುವ ಮಿಲಿಯನ್ ಡಾಲರ್ ಟೂರ್ನಿ ಹಲವು ಕ್ರಿಕೆಟಿಗರ ವೃತ್ತಿ ಬದುಕನ್ನು ನಿರ್ಧರಿಸುವ ಸಾಧ್ಯತೆಯಿತ್ತು. ಭಾರತೀಯ ಕ್ರಿಕೆಟಿಗರು ಮಾತ್ರವಲ್ಲ, ವಿದೇಶಿ ಕ್ರಿಕೆಟಿಗರು ಐಪಿಎಲ್ ಟೂರ್ನಿಯಲ್ಲಿ ತಮ್ಮ ಅದೃಷ್ಠ ಪರೀಕ್ಷೆ ನಡೆಸುವ ಲೆಕ್ಕಾಚಾರದಲ್ಲಿದರು. ಆದರೆ ಕೊರೋನಾ ಎನ್ನುವ ಹೆಮ್ಮಾರಿ ಕೆಲ ಕ್ರಿಕೆಟಿರ ವೃತ್ತಿ ಬದುಕಿಗೆ ಪೂರ್ಣ ವಿರಾಮವಿಡುವ ಸಾಧ್ಯತೆಯಿದೆ.

IPL 2020 ಆಯೋಜನೆ ಕುರಿತು ಭವಿಷ್ಯ ಹೇಳಿದ ಬಿಸಿಸಿಐ ಅಧ್ಯಕ್ಷ ಗಂಗೂಲಿ !

ಹೌದು, ಈಗಾಗಲೇ ಭಾರತ 21 ದಿನಗಳ ಕಾಲ ಲಾಕ್‌ಡೌನ್ ಆಗಿದ್ದು, 2020ರ ಐಪಿಎಲ್ ನಡೆಯುವುದು ಬಹುತೇಕ ಅನುಮಾನ ಎನಿಸಿದೆ. ಹೀಗಾದಲ್ಲಿ ಕೆಲ ಕ್ರಿಕೆಟಿಗರ ವೃತ್ತಿ ಬದುಕು ಟಿ20 ವಿಶ್ವಕಪ್ ಟೂರ್ನಿಗೂ ಮುನ್ನವೇ ಅಂತ್ಯ ಕಾಣಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ. 
 
Video Top Stories