Asianet Suvarna News Asianet Suvarna News

ವೇಗಿಗಳೇ ಹರಿಣಗಳ ತಂಡದ ದೊಡ್ಡ ಶಕ್ತಿ ಎಂದ ಜಾಕ್ ಕಾಲಿಸ್

* ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾಕ್ ಕಾಲಿಸ್‌ ಎಕ್ಸ್‌ಕ್ಲೂಸಿವ್ ಸಂದರ್ಶನ
* ಟಿ20 ಸರಣಿಗೂ ಮುನ್ನ ಉಭಯ ತಂಡಗಳಿಗೆ ಈ ಸರಣಿ ಸಾಕಷ್ಟು ಮಹತ್ವದ್ದಾಗಿದೆ
* ಭಾರತದ ವಾತಾವರಣಕ್ಕೂ ಆಸ್ಟ್ರೇಲಿಯಾ ವಾತಾವರಣಕ್ಕೂ ಸಾಕಷ್ಟು ವಿಭಿನ್ನವಾಗಿದೆ
* ಆದರೂ ಆಸೀಸ್‌ನಲ್ಲಿ ನಮ್ಮ ವೇಗಿಗಳು ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ
* ವಿಶ್ವದರ್ಜೆಯ ವೇಗಿಗಳನ್ನು ಹೊಂದಿರುವುದು ನಮ್ಮ ತಂಡದ ದೊಡ್ಡ ಶಕ್ತಿ ಎಂದ ಕಾಲಿಸ್

ತಿರುವನಂತಪುರಂ(ಸೆ.28): ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಗೂ ಮುನ್ನ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾಕ್‌ ಕಾಲಿಸ್, ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್‌ ಜತೆ ಮನಬಿಚ್ಚಿ ಮಾತನಾಡಿದ್ದಾರೆ. 

ಭಾರತದ ಪಿಚ್‌ಗೂ ಹಾಗೂ ಆಸ್ಟ್ರೇಲಿಯಾದ ಪಿಚ್‌ಗೂ ಸಾಕಷ್ಟು ವ್ಯತ್ಯಾಸವಿದೆ. ಆದರೂ ಭಾರತದಂತಹ ಬಲಿಷ್ಠ ತಂಡದೊಂದಿಗೆ ಕಾದಾಟ ನಡೆಸುವುದು ಹರಿಣಗಳ ಪಡೆಗೆ ಹೆಚ್ಚು ಅನುಕೂಲವಾಗಲಿದೆ. ಇನ್ನು ಆಸ್ಟ್ರೇಲಿಯಾದ ಪಿಚ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ವೇಗಿಗಳು ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ಮಾಜಿ ಆಲ್ರೌಂಡರ್ ಜಾಕ್ ಕಾಲಿಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.