ಎನ್ ಜಗದೀಶನ್ ವಿಶ್ವದಾಖಲೆ 277ರನ್ ಹಿಂದೆ ಧೋನಿ ಟಿಪ್ಸ್, ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ exclusive ಮಾತು!
ವಿಜಯ್ ಹಜಾರೆ ಟೂರ್ನಿಯಲ್ಲಿ ತಮಿಳುನಾಡು ಕ್ರಿಕೆಟಿಗರ್ ಎನ್ ಜಗದೀಶನ್ 277 ರನ್ ಸಿಡಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆಯಲ್ಲಿ ಧೋನಿ ನೆರವೂ ಕೂಡ ಇದೆ. ಈ ಕುರಿತು ಎನ್ ಜಗದೀಶನ್ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ.
ವಿಜಯ್ ಹಜಾರೆ ಟೂರ್ನಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ತಮಿಳುನಾಡು ಬ್ಯಾಟ್ಸ್‌ಮನ್ ಜಗದೀಶನ್ ಈಗಾಗಲೇ ಸತತ 5 ಸೆಂಚುರಿ, ವಿಶ್ವದಾಖಲೆಯ 277 ರನ್ ಸಿಡಿಸಿ ಎಲ್ಲರ ಗಮನಸೆಳೆದಿದ್ದಾರೆ.ಅರುಣಾಚಲ ಪ್ರದೇಶದ ವಿರುದ್ಧದ ಪಂದ್ಯದಲ್ಲಿ ಜಗದೀಶನ್ 141 ಎಸೆತದಲ್ಲಿ 277ರನ್ ಸಿಡಿಸಿದ್ದಾರೆ. ಲಿಸ್ಟ್ 1 ಕ್ರಿಕೆಟ್‌ನ ಗರಿಷ್ಠ ರನ್, ಸತತ 5 ಶತಕ ಸಿಡಿಸಿ ದಾಖಲೆ, ಗರಿಷ್ಠ ಜೊತೆಯಾದ ದಾಖಲೆ ಸೇರಿದಂತೆ ಹತ್ತು ಹಲವು ದಾಖಲೆಗಳು ನಿರ್ಮಾಣವಾಗಿದೆ. ಜಗದೀಶನ್ ಸ್ಫೋಟಕ ಬ್ಯಾಟಿಂಗ್‌ಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ವಿಶ್ವ ಕ್ರಿಕೆಟ್‌ನ ಹಲವು ದಿಗ್ಗಜರ ದಾಖಲೆಗಳು ಪುಡಿ ಪುಡಿಯಾಗಿದೆ. ವಿಶ್ವದಾಖಲೆಯ ಇನ್ನಿಂಗ್ಸ್ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್. ಧೋನಿ ನೆರವು ಇದೆ. ಈ ಕುರಿತು ಸ್ವತಃ ಎನ್ ಜಗದೀಶನ್ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ.