ಅಂತಾರಾಷ್ಟ್ರೀಯ ಕ್ರಿಕೆಟಿಗನಿಗೂ ತಟ್ಟಿದ ಕೊರೋನಾ ಶಾಕ್..!

ಪಾಕಿಸ್ತಾನ ಸೂಪರ್‌ ಲೀಗ್‌(ಪಿಎಸ್‌ಎಲ್‌) ಟಿ20 ಟೂರ್ನಿಯಲ್ಲಿ ಆಡುತ್ತಿದ್ದ ಹೇಲ್ಸ್‌, ಕೊರೋನಾ ಸೋಂಕು ಹರಡುತ್ತಿರುವ ಭೀತಿಯಿಂದ ಶನಿವಾರ ಲಂಡನ್‌ಗೆ ವಾಪಸಾದರು. ಆದರೆ ಭಾನುವಾರ ಬೆಳಗ್ಗೆ ಅವರಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದ ಕಾರಣ ಸ್ವಯಂ ದಿಗ್ಬಂಧನಕ್ಕೆ ಒಳಗಾಗಿದ್ದಾರೆ. 

Share this Video
  • FB
  • Linkdin
  • Whatsapp

ಲಂಡನ್‌(ಮಾ.18): ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ ಅಲೆಕ್ಸ್‌ ಹೇಲ್ಸ್‌ ಮಂಗಳವಾರ ತಮಗೆ ಕೊರೋನಾ ಸೋಂಕು ತಗುಲಿರಬಹುದು ಎನ್ನುವ ಆತಂಕಕಾರಿ ವಿಷಯನ್ನು ಬಹಿರಂಗಪಡಿಸಿದ್ದಾರೆ. 

ಸ್ಪೇನ್‌ನ 21ರ ಫುಟ್ಬಾಲ್‌ ಕೋಚ್‌ ಬಲಿ ಪಡೆದ ಕೊರೋನಾ ವೈರಸ್..!

ಪಾಕಿಸ್ತಾನ ಸೂಪರ್‌ ಲೀಗ್‌(ಪಿಎಸ್‌ಎಲ್‌) ಟಿ20 ಟೂರ್ನಿಯಲ್ಲಿ ಆಡುತ್ತಿದ್ದ ಹೇಲ್ಸ್‌, ಕೊರೋನಾ ಸೋಂಕು ಹರಡುತ್ತಿರುವ ಭೀತಿಯಿಂದ ಶನಿವಾರ ಲಂಡನ್‌ಗೆ ವಾಪಸಾದರು. ಆದರೆ ಭಾನುವಾರ ಬೆಳಗ್ಗೆ ಅವರಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದ ಕಾರಣ ಸ್ವಯಂ ದಿಗ್ಬಂಧನಕ್ಕೆ ಒಳಗಾಗಿದ್ದಾರೆ. 

ಕೊರೋನಾ ಎಫೆಕ್ಟ್: ಪಾಕಿಸ್ತಾನ ಸೂಪರ್ ಲೀಗ್ ಸೆಮೀಸ್ ರದ್ದು..!

‘ಭಾನುವಾರದಿಂದ ನಿರಂತರವಾಗಿ ಕೆಮ್ಮುತ್ತಿದ್ದೇನೆ. ಆದರೆ ಇನ್ನೂ ಪರೀಕ್ಷೆಗೆ ಒಳಗಾಗಿಲ್ಲ’ ಎಂದು ಹೇಲ್ಸ್‌ ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಹೇಲ್ಸ್‌ಗೆ ಸೋಂಕು ತಗುಲಿರಬಹುದು ಎನ್ನುವ ಅನುಮಾನದಿಂದ ಪಿಎಸ್‌ಎಲ್‌ ಸೆಮೀಸ್‌ ಹಾಗೂ ಫೈನಲ್‌ ಪಂದ್ಯವನ್ನು ಮುಂದೂಡಲಾಗಿದೆ.

Related Video