ಕೊರೋನಾ ಎಫೆಕ್ಟ್: ಪಾಕಿಸ್ತಾನ ಸೂಪರ್ ಲೀಗ್ ಸೆಮೀಸ್ ರದ್ದು..!
ಕೊರೋನಾ ವೈರಸ್ ಭೀತಿ ಪಾಕಿಸ್ತಾನ ಸೂಪರ್ ಲೀಗ್‌ಗೂ ತಟ್ಟಿದೆ. ಪರಿಣಾಮ ಸೆಮಿಫೈನಲ್ ಪಂದ್ಯಗಳು ರದ್ದು ಪಡಿಸಲಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.
ಲಾಹೋರ್(ಮಾ.17): ಕೊರೋನಾ ವೈರಸ್ ಭೀತಿಯಿಂದಾಗಿ ಪಾಕಿಸ್ತಾನ ಸೂಪರ್ ಲೀಗ್ ಸೆಮಿಫೈನಲ್ ಪಂದ್ಯಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಮುಚ್ಚಿದ ಸ್ಟೇಡಿಯಂನಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಪಿಎಸ್ಎಲ್ ಟೂರ್ನಿ ಇದೀಗ ರದ್ದಾಗಿದೆ.
ಕ್ರಿಕೆಟ್‌ಗಿಂತ ಬದುಕು ಮುಖ್ಯ; ಪಾಕ್ ಲೀಗ್‌ಗೆ ಕ್ರಿಸ್ ಲಿನ್ ಗುಡ್ ಬೈ
ತುರ್ತು ಸಭೆ ಕರೆದ ಪಾಕಿಸ್ತಾನ ಕ್ರಿಕೆಟ್ ಮಂಡಳಿ(PCB) ಮಂಡಳಿಯು ಫ್ರಾಂಚೈಸಿ ಮಾಲೀಕರ ಜತೆ ಮಾತುಕತೆಯನ್ನು ನಡೆಸಿ ಪಿಎಸ್ಎಲ್ ಸೆಮಿಫೈನಲ್ ಪಂದ್ಯಗಳನ್ನು ಮುಂದೂಡಲು ತೀರ್ಮಾನಿಸಲಾಯಿತು. ಎಲ್ಲಾ ಆಟಗಾರರು, ಸಿಬ್ಬಂದಿ, ಪ್ರೇಕ್ಷಕರ ಆರೋಗ್ಯ ಗಮನದಲ್ಲಿಟ್ಟುಕೊಂಡು ಟೂರ್ನಿಯನ್ನು ತುರ್ತಾಗಿ ಮುಂದೂಡುವ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಪೇಶಾವರ್ ಜಲ್ಮಿ ತಂಡ ಮಾಲೀಕ ಜಾವೇದ್ ಅಖ್ತರ್ ತಿಳಿಸಿದ್ದಾರೆ.
ಒಬ್ಬ ವಿದೇಶಿ ಆಟಗಾರನಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಟೂರ್ನಿಯನ್ನು ತಾತ್ಕಾಲಿಕವಾಗಿ ಮುಂದೂಡುವ ತೀರ್ಮಾನಕ್ಕೆ ಬರಲಾಯಿತು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಿಇಒ ವಾಸೀಂ ಖಾನ್ ತಿಳಿಸಿದ್ದಾರೆ. ಆದರೆ ಯಾರು ಆ ಆಟಗಾರ ಎನ್ನುವ ವಿಚಾರವನ್ನು ಬಾಯ್ಬಿಟ್ಟಿಲ್ಲ.
ಕ್ರೀಡೆಗೆ ಗಡಿಯ ಹಂಗಿಲ್ಲ: ಧೋನಿ ಜೆರ್ಸಿ ತೊಟ್ಟ ಪಾಕ್ ಅಭಿಮಾನಿ
ಈಗಾಗಲೇ ಲಾಹೋರ್ ಖಲಂದರ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಕ್ರಿಸ್ ಲಿನ್ ಹಾಗೂ ಕಿವೀಸ್ ವೇಗಿ ಮಿಚೆಲ್ ಮೆಕ್ಲೆನಾಘನ್ ಅವರು ತವರಿಗೆ ಮರಳಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಲಾಹೋರಿನ ಗಢಾಫಿ ಮೈದಾನದಲ್ಲಿ ಮಾರ್ಚ್ 17ರಂದು ಮುಲ್ತಾನ್ ಸುಲ್ತಾನ್ ತಂಡವು ಪೇಶಾವರ್ ಜಲ್ಮಿ ವಿರುದ್ಧ ಸೆಣಸಬೇಕಿತ್ತು. ಇನ್ನು ಮತ್ತೊಂದು ಸೆಮೀಸ್ ಪಂದ್ಯದಲ್ಲಿ ಕರಾಚಿ ಕಿಂಗ್ಸ್ ತಂಡವು ಲಾಹೋರ್ ಖಲಂದರ್ ತಂಡಗಳು ಮುಖಾಮುಖಿಯಾಗಬೇಕಿತ್ತು.