Asianet Suvarna News Asianet Suvarna News

ಹೊಸ ತಂತ್ರಜ್ಞಾನದೊಂದಿಗೆ ಐಪಿಎಲ್‌ಗೆ ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂ ಸಜ್ಜು

ಸುಂದರ ಧರ್ಮಶಾಲಾ ಕ್ರಿಕೆಟ್‌ ಸ್ಟೇಡಿಯಂ ಮತ್ತಷ್ಟು ಉತ್ತಮ ಸೌಕರ್ಯ ಹೊಂದಿದೆ
ಮೇ 17& ಮೇ 19 ಎರಡು ಐಪಿಎಲ್‌ ಪಂದ್ಯಗಳಿಗೆ ಈ ಬಾರಿ ಧರ್ಮಶಾಲಾ ಮೈದಾನ ಆತಿಥ್ಯ
ಪಂಜಾಬ್ ಕಿಂಗ್ಸ್ ತಂಡವು ಇಲ್ಲಿ ರಾಜಸ್ಥಾನ ರಾಯಲ್ಸ್ & ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಕಾದಾಟ ನಡೆಸಲಿದೆ
ಈ ಸ್ಟೇಡಿಯಂನಲ್ಲಿ ಜಗತ್ತಿನ ಅತಿದೊಡ್ಡ ಡ್ರೈನೇಜ್‌ ವ್ಯವಸ್ಥೆಯನ್ನು ಮಾಡಲಾಗಿದೆ
 

ಧರ್ಮಶಾಲಾ(ಮೇ.17): ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯಕ್ಕೆ ಇಲ್ಲಿನ ಧರ್ಮಾಶಾಲ ಕ್ರಿಕೆಟ್ ಸ್ಟೇಡಿಯಂ ಆತಿಥ್ಯ ವಹಿಸಿದೆ. ಹೊಸದಾಗಿ ನಿರ್ಮಾಣಗೊಂಡಿರುವ ಈ ಸ್ಟೇಡಿಯಂನಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗಿದೆ. ಈ ಸ್ಟೇಡಿಯಂನಲ್ಲಿ ಸಬ್‌ಏರ್ ಸಿಸ್ಟಂ ಅಳವಡಿಸಲಾಗಿದೆ. ಈ ಮೂಲಕ ಈ ತಂತ್ರಜ್ಞಾನ ಅಳವಡಿಸಿಕೊಂಡ ಭಾರತದ ಎರಡನೇ ಕ್ರಿಕೆಟ್ ಸ್ಟೇಡಿಯಂ ಎನ್ನುವ ಕೀರ್ತಿಗೆ ಈ ಸ್ಟೇಡಿಯಂ ಪಾತ್ರವಾಗಿದೆ.

IPL 2023 ಡೆಲ್ಲಿ ಎದುರು ಪಂಜಾಬ್ ಕಿಂಗ್ಸ್‌ಗೆ ಡು ಆರ್‌ ಡೈ ಪಂದ್ಯ

ಬರೋಬ್ಬರಿ 9 ವರ್ಷಗಳ ಬಳಿಕ ಧರ್ಮಶಾಲಾದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆಯೋಜನೆಗೊಂಡಿದೆ.ಇಲ್ಲಿ 2013ರಲ್ಲಿ ಕೊನೆಯ ಬಾರಿಗೆ ಐಪಿಎಲ್ ಪಂದ್ಯಗಳು ಜರುಗಿದ್ದವು.