Asianet Suvarna News Asianet Suvarna News

Asia Cup 2022: ಸುಮ್ನೆ ಟೆನ್ಶನ್‌ ತಗೋಬೇಡಿ, ಫೈನಲ್‌ಗೆ ಹೋಗ್ತೇವೆ: ರೋಹಿತ್ ಶರ್ಮ


8ನೇ ಬಾರಿಗೆ ಏಷ್ಯಾಕಪ್‌ ಗೆಲ್ಲುವ ಭಾರತ ತಂಡದ ಕನಸು ಬಹುತೇಕ ಭಗ್ನಗೊಂಡಿದೆ. ಶ್ರೀಲಂಕಾ ವಿರುದ್ಧ ಮಂಗಳವಾರ ನಡೆದ ಸೂಪರ್‌-4 ಹಂತದ ಪಂದ್ಯದಲ್ಲಿ 6 ವಿಕೆಟ್‌ ಸೋಲು ಅನುಭವಿಸಿ, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು. ಬಾಕಿ ಇರುವ 3 ಪಂದ್ಯಗಳ ಫಲಿತಾಂಶಗಳು ತನ್ನ ಪರವಾಗಿ ಬಂದರಷ್ಟೇ ಭಾರತ ಫೈನಲ್‌ಗೇರುವ ಸಾಧ್ಯತೆ ಇರಲಿದೆ.
 

Sep 7, 2022, 4:23 PM IST

ದುಬೈ (ಸೆ.7): ಏಷ್ಯಾಕಪ್‌ ಟಿ20 ಟೂರ್ನಿಯ ಸೂಪರ್‌-4 ಹಂತದಲ್ಲಿ ಭಾರತ ಸತತ ಎರಡು ಸೋಲು ಕಂಡಿದೆ. ಫೈನಲ್‌ ಹೋಗುವ ಆಸೆ ಬಹುತೇಕವಾಗಿ ಭಗ್ನವಾಗಿದೆ. ಆದರೆ, ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮ ಮಾತ್ರ ತಂಡ ಫೈನಲ್‌ಗೇರುವ ವಿಶ್ವಾಸದಲ್ಲಿದ್ದಾರೆ. ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್‌ ಶರ್ಮಗೆ ಇದೇ ಪ್ರಶ್ನೆ ಎದುರಾಯಿತು. ಅಭಿಮಾನಿಗಳು ಭಾರತದ ಫೈನಲ್‌ ಆಗುವುದನ್ನು ನಿರೀಕ್ಷೆ ಮಾಡಿದ್ದರು. ಆದರೆ, ಈಗ ಸಾಧ್ಯವಿಲ್ಲವಲ್ಲ ಎನ್ನುವ ಪ್ರಶ್ನೆಗೆ ತಮಾಷೆಯಿಂದಲೇ ಉತ್ತರಿಸಿದ ರೋಹಿತ್‌ ಶರ್ಮ, ಸುಮ್ನೆ ಟೆನ್ಶನ್‌ ತಗೋಬೇಡಿ. ಎಲ್ಲಾ ಆಗುತ್ತೆ. ಫೈನಲ್‌ಗೆ ಹೋಗ್ತೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ಸೋಲಿನ ಬಳಿಕ ತಂಡದ ಡ್ರೆಸಿಂಗ್‌ ರೂಮ್‌ ವಾತಾವರಣ ಹೇಗಿದೆ ಎನ್ನುವ ಪ್ರಶ್ನೆ ಎದುರಾಯಿತು. ನನ್ನ ಪ್ರಕಾರ ಏನೋ ತಪ್ಪಾಗಿದೆ ಎಂದು ನನಗೆ ಅನಿಸೋದಿಲ್ಲ. ಹೊರಗಡೆಯಿಂದ ನಿಂತು ನೋಡಿದಾಗ ನಿಮಗೆ ಹಾಗೆ ಅನಿಸಬಹುದು. ಆದರೆ, ತಂಡದ ಡ್ರೆಸಿಂಗ್‌ ರೂಮ್‌ ಹಾಗಿಲ್ಲ. ನಾನು ಸಾಕಷ್ಟು ಸುದ್ದಿಗೋಷ್ಠಿಯನ್ನು ಎದುರಿಸಿದ್ದೇನೆ. ಸೋಲು ಕಂಡಾಗ ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದೆಲ್ಲಾ ಸಹಜವಾದ ವಿಚಾರ ಎಂದರು.

Asia Cup 2022  ಕೊನೇ ಓವರ್‌ನಲ್ಲಿ ಡೈರೆಕ್ಟ್‌ ಹಿಟ್‌ ಮಿಸ್‌ ಮಾಡಿದ ಪಂತ್‌, ಟ್ವಿಟ್‌ನಲ್ಲಿ  Miss You MS Dhoni ಟ್ರೆಂಡ್‌

ತಂಡದ ವಿಚಾರದ ಬಗ್ಗೆ ಹೇಳುವುದಾದರೆ, ಈಗಲೇ ನೀವು ಡ್ರೆಸಿಂಗ್‌ ರೂಮ್‌ಗೆ ಹೋಗಿ, ನಮ್ಮ ಆಟಗಾರರು ನಿರಾಳವಾಗಿದ್ದಾರೆ. ತಂಡ ಸೋಲಲಿ ಅಥವಾ ಗೆಲ್ಲಲಿ ಒಂದೇ ರೀತಿ ಇರಬೇಕು. ಅಂಥದ್ದೊಂದು ವಾತಾವರಣ ಟೀಮ್‌ ಇಂಡಿಯಾದಲ್ಲಿದೆ ಎಂದು ರೋಹಿತ್‌ ಶರ್ಮ ಹೇಳಿದ್ದಾರೆ.