ಆಸೀಸ್ ಅಗ್ನಿ ದುರಂತಕ್ಕೆ ಮಿಡಿದ ವಾರ್ನ್; ಕ್ಯಾಪ್ ಹರಾಜಿಗಿಟ್ಟ ಸ್ಪಿನ್ ದಿಗ್ಗಜ

ಸದ್ಯದ ಮಾಹಿತಿ ಪ್ರಕಾರ ಆಸ್ಟ್ರೇಲಿಯಾದಲ್ಲಿ ನಡೆದಿರುವ ಅಗ್ನಿ ಅನಾಹುತಕ್ಕೆ 60ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರೆ, ಲಕ್ಷಾಂತರ ಪ್ರಾಣಿ-ಪಕ್ಷಿಗಳು ಅಸು ನೀಗಿವೆ. ಹೀಗಿರುವಾಗಲೇ ಜಗತ್ತಿನ ನಾನಾ ಮೂಲೆಗಳಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. 

First Published Jan 8, 2020, 2:12 PM IST | Last Updated Jan 8, 2020, 2:12 PM IST

ಸಿಡ್ನಿ[ಜ.08]: ಆಸ್ಟ್ರೇಲಿಯಾ ಹಿಂದೆಂದೂ ಕಂಡು ಕೇಳರಿಯದ ಭೀಕರ ಕಾಳ್ಗಿಚ್ಚಿಗೆ ಸಿಲುಕಿದೆ. ಅಗ್ನಿಯ ರುದ್ರ ನರ್ತನಕ್ಕೆ ಕಾಂಗರೂ ನಾಡು ತತ್ತರಿಸಿ ಹೋಗಿದೆ.

ಆಸ್ಪ್ರೇಲಿಯಾ ಕಾಳ್ಗಿಚ್ಚು ಜಗತ್ತಿಗೆ ಏಕೆ ಎಚ್ಚರಿಕೆ ಗಂಟೆ?

ಸದ್ಯದ ಮಾಹಿತಿ ಪ್ರಕಾರ ಈ ಅಗ್ನಿ ಅನಾಹುತಕ್ಕೆ 60ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರೆ, ಲಕ್ಷಾಂತರ ಪ್ರಾಣಿ-ಪಕ್ಷಿಗಳು ಅಸು ನೀಗಿವೆ. ಹೀಗಿರುವಾಗಲೇ ಜಗತ್ತಿನ ನಾನಾ ಮೂಲೆಗಳಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. 

IPL 2020 ದೊಡ್ಡ ಲಾಭದ ನಿರೀಕ್ಷೆಯಲ್ಲಿ ಶೇನ್‌ ವಾರ್ನ್‌!

ಇನ್ನು ಕ್ರಿಕೆಟ್’ನಲ್ಲಿ ಆಸ್ಟ್ರೇಲಿಯಾ ಪರ ದಶಕಗಳ ಕಾಲ ತನ್ನ ದೇಶವನ್ನು ಪ್ರತಿನಿಧಿಸಿ ಹಲವಾರು ಸ್ಮರಣೀಯ ಗೆಲುವು ತಂದಿತ್ತ ಶೇನ್ ವಾರ್ನ್ ಇದೀಗ ತಮ್ಮಲಿರುವ ಅಮೂಲ್ಯ ವಸ್ತುವನ್ನು ಹರಾಜಿಗಿಡಲು ಮುಂದಾಗಿದ್ದಾರೆ. ಬಂದ ಹಣವನ್ನು ಪ್ರಕೃತಿ ವಿಕೋಪ ನಿಧಿಗೆ ನೀಡಲು ಮುಂದಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...