IPL 2020 ದೊಡ್ಡ ಲಾಭದ ನಿರೀಕ್ಷೆಯಲ್ಲಿ ಶೇನ್ ವಾರ್ನ್!
ಆಸ್ಟ್ರೇಲಿಯಾ ಸ್ಪಿನ್ ದಿಗ್ಗಜ ಐಪಿಎಲ್‌ನಿಂದ ಅತಿದೊಡ್ಡ ಲಾಭದ ನಿರೀಕ್ಷೆಯಲ್ಲಿದ್ದಾರೆ. ರಾಜಸ್ಥಾನ ರಾಯಲ್ಸ್ ಪರ ಶೇ.3% ಷೇರು ಹೊಂದಿರುವ ವಾರ್ನ್ ದುಪ್ಪಟ್ಟು ಲಾಭದ ಲೆಕ್ಕಾಚಾರದಲ್ಲಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಮೆಲ್ಬರ್ನ್(ಡಿ.09): ಐಪಿಎಲ್ನ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಸಣ್ಣ ಪಾಲು ಹೊಂದಿರುವ ಸ್ಪಿನ್ ದಿಗ್ಗಜ ಶೇನ್ ವಾರ್ನ್ ದೊಡ್ಡ ಲಾಭದ ನಿರೀಕ್ಷೆಯಲ್ಲಿದ್ದಾರೆ.
2008ರಲ್ಲಿ ನಿವೃತ್ತಿಯಿಂದ ಹೊರಬಂದು ರಾಜಸ್ಥಾನ ತಂಡವನ್ನು ಮುನ್ನಡೆಸಿದ್ದ ವಾರ್ನ್‌ಗೆ 4.68 ಕೋಟಿ ರುಪಾಯಿ ಸಂಭಾವನೆ ಹಾಗೂ ವರ್ಷಕ್ಕೆ 0.75ರಷ್ಟು ಪಾಲು ನೀಡಲು ಮಾಲಿಕರು ಒಪ್ಪಿದ್ದರು. 4 ವರ್ಷಗಳ ಕಾಲ ತಂಡದಲ್ಲಿದ್ದ ವಾರ್ನ್ ಬಳಿ ಶೇ.3ರಷ್ಟು ಷೇರುಗಳಿವೆ.
IPL 2020; ಕೆಎಲ್ ರಾಹುಲ್‌ಗೆ ನಾಯಕತ್ವ ನೀಡಲು ಮುಂದಾದ KXIP !
ಸದ್ಯ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮೌಲ್ಯ 200 ಮಿಲಿಯನ್ ಡಾಲರ್ (1425 ಕೋಟಿ ರುಪಾಯಿ). ಮುಂದಿನ ಕೆಲ ವರ್ಷಗಳಲ್ಲಿ ಈ ಮೊತ್ತ ದುಪ್ಪಟ್ಟಾಗುವ ನಿರೀಕ್ಷೆ ಇದೆ. ಅಂದರೆ 400 ಮಿಲಿಯನ್ ಡಾಲರ್ (ಅಂದಾಜು 2851 ಕೋಟಿ ರುಪಾಯಿ)ನಲ್ಲಿ ಶೇ.3ರಷ್ಟು ಪಾಲನ್ನು ವಾರ್ನ್ ಮಾರಾಟ ಮಾಡಿದರೆ 85.55 ಕೋಟಿ ರುಪಾಯಿಯಷ್ಟು ಹಣ ಸಿಗಲಿದೆ.
ರಾಜಸ್ಥಾನ ರಾಯಲ್ಸ್ ತಂಡವು ಐಪಿಎಲ್ ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್ ಆಗಿತ್ತು. ಆಗ ಶೇನ್ ವಾರ್ನ್ ತಂಡವನ್ನು ಮುನ್ನಡೆಸಿದ್ದರು. ಆ ಬಳಿಕ ಆವೃತ್ತಿಯಲ್ಲಿ ರಾಜಸ್ಥಾನ ಉತ್ತಮ ಪೈಪೋಟಿ ನೀಡುತ್ತಿದ್ದರೂ ತಂಡ ಮತ್ತೊಮ್ಮೆ ಕಪ್ ಎತ್ತಿಹಿಡಿಯಲು ಸಫಲವಾಗಿಲ್ಲ.