ಕೊರೋನಾ ಸಂತ್ರಸ್ಥರ ನೆರವಿಗೆ 2 ಕೋಟಿ ರುಪಾಯಿ ನೀಡಿದ ಸಂಸದ ರಾಜೀವ್ ಚಂದ್ರಶೇಖರ್

ಆಸ್ಫತ್ರೆಯಲ್ಲಿ ಚಿಕಿತ್ಸೆಗೆ ಅಗತ್ಯವಿರುವ ಉಪಕರಣಗಳ ಖರೀದಿಗೆ ಬರೋಬ್ಬರಿ 2 ಕೋಟಿ ರುಪಾಯಿ ಹಣವನ್ನು ನೀಡುವ ಮೂಲಕ ಸಂಸದ ರಾಜೀವ್ ಚಂದ್ರಶೇಖರ್ ಮಾದರಿಯಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Share this Video
  • FB
  • Linkdin
  • Whatsapp

ಬೆಂಗಳೂರು(ಮಾ.27): ಕೊರೋನಾ ಸಂತ್ರಸ್ಥರ ನೆರವಿಗೆ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಧಾವಿಸಿದ್ದು, ತಮ್ಮ ಸಂಸದರ ನಿಧಿಯಿಂದ ಎರಡು ಕೋಟಿ ರುಪಾಯಿ ಹಣವನ್ನು ವಿಕ್ಟೋರಿಯಾ ಆಸ್ಫತ್ರೆಗೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊರೋನಾ ವೈರಸ್ ವಿರುದ್ಧ ಹೋರಾಟ; ಸರ್ಕಾರಕ್ಕೆ 50 ಲಕ್ಷ ರೂ ನೀಡಿದ ಸಚಿನ್ ತೆಂಡುಲ್ಕರ್!

ಬೆಂಗಳೂರಿನ ವಿಕ್ಟೋರಿಯಾ ಆಸ್ಫತ್ರೆಯಲ್ಲಿ ಕೋವಿಡ್ 19 ಸೋಂಕು ಹೊಂದಿರುವ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಆಸ್ಫತ್ರೆಯಲ್ಲಿ ಚಿಕಿತ್ಸೆಗೆ ಅಗತ್ಯವಿರುವ ಉಪಕರಣಗಳ ಖರೀದಿಗೆ ಬರೋಬ್ಬರಿ 2 ಕೋಟಿ ರುಪಾಯಿ ಹಣವನ್ನು ನೀಡುವ ಮೂಲಕ ಕೊರೋನಾ ವೈರಸ್ ಸಂತ್ರಸ್ಥರಿಗೆ ನೆರವಾಗಿದ್ದಾರೆ. ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಕೂಡಾ ಪ್ರಧಾನಮಂತ್ರಿ ರಾಷ್ಟ್ರೀಯ ವಿಕೋಪ ನಿಧಿಗೆ 50 ಲಕ್ಷ ರುಪಾಯಿ ದೇಣಿಗೆ ನೀಡಿ ಹಲವರಿಗೆ ಸ್ಫೂರ್ತಿಯಾಗಿದ್ದಾರೆ.

ಮುಂದಿನ 3 ತಿಂಗಳು EMI ಪಾವತಿ ಮಾಡೋದು ಬೇಡ್ವಾ..?

ಈಗಾಗಲೇ ರಾಜ್ಯ ಸರ್ಕಾರ ನಗರದ ವಿಕ್ಟೋರಿಯ ಆಸ್ಪತ್ರೆಯನ್ನು ಕೋವಿಡ್ 19 ಪ್ರತ್ಯೇಕ ನಿಗಾ ಘಟಕವನ್ನಾಗಿ ಪರಿವರ್ತಿಸಿತ್ತು. ಆಸ್ಪತ್ರೆಗೆ ತುರ್ತಾಗಿ ಬೇಕಾದ ಮಾಸ್ಕ್, ವೆಂಟಿಲೇಟರ್ ಖರೀದಿಸಲು ಸಂಸದ ರಾಜೀವ್ ಚಂದ್ರಶೇಖರ್ ನೆರವಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Related Video